ನ್ಯೂಸ್ ನಾಟೌಟ್: ಅಪಘಾತಕ್ಕೆ ಸಿಲುಕಿದ್ದ ವಾಹನದ ಸವಾರರನ್ನು ರಕ್ಷಿಸುವುದಕ್ಕೆ ತೆರಳಿದ್ದ ಸುಳ್ಯದ ವ್ಯಕ್ತಿಯೊಬ್ಬರು ಕೈ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.
ಸುಳ್ಯದ ಯುವ ಉದ್ಯಮಿ ಗಣೇಶ್ ಇಂಡಸ್ಟ್ರೀಸ್ನ ಮಾಲೀಕ ಜಗದೀಶ್ ಸರಳಿಕುಂಜರವರು ಮಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದರು. ಈ ವೇಳೆ ಪುತ್ತೂರು -ಸುಳ್ಯ ಹೆದ್ದಾರಿ ಮಧ್ಯೆ ಸಂಟ್ಯಾರು ಬಳಿ ಆಲ್ಟೋ ಕಾರೊಂದು ಅಪಘಾತಕ್ಕೀಡಾಗಿತ್ತು. ಇದನ್ನು ನೋಡಿದ ಗಣೇಶ್ ಅವರು ತಮ್ಮ ವಾಹವನ್ನು ನಿಲ್ಲಿಸಿ ಅದರಲ್ಲಿದ್ದ ವಾಹನ ಸವಾರರ ರಕ್ಷಣೆಗೆ ನೆರವಾಗಿದ್ದಾರೆ. ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ಗುಂಡಿಗೆ ಬಿದ್ದುದರಿಂದ ಅವರ ಕೈಗೆ ಗಂಭೀರವಾಗಿ ಏಟು ಬಿದ್ದು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.