Latestಕ್ರೈಂವೈರಲ್ ನ್ಯೂಸ್

ನಗ್ನ ವಿಡಿಯೋ ಚಿತ್ರಿಸಿ ಯುವತಿಯ ಮೇಲೆ 7 ಮಂದಿಯಿಂದ ನಿರಂತರ ಅತ್ಯಾಚಾರ..! 16 ತಿಂಗಳ ಬಳಿಕ ದೂರು ದಾಖಲು..!

508
Spread the love

ನ್ಯೂಸ್ ನಾಟೌಟ್: ಗುಜರಾತ್‌ ನ ಬನಾಸ್‌ ಕಾಂತ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬಳ ನಗ್ನ ವಿಡಿಯೋ ಇರಿಸಿಕೊಂಡು ಬ್ಲ್ಯಾಕ್‌ ಮೇಲ್ ಮಾಡಿ, 7 ಮಂದಿಯ ಗುಂಪು ಆಕೆಯನ್ನು ಸುಮಾರು 16 ತಿಂಗಳು ಅತ್ಯಾಚಾರ ನಡೆಸಿದೆ ಎಂದು ಪೊಲೀಸರು ಬುಧವಾರ(ಮಾ.12) ತಿಳಿಸಿದ್ದಾರೆ.

2023ರಲ್ಲಿ ಪಾಲಾನ್‌ ಪುರದ ಕಾಲೇಜೊಂದಕ್ಕೆ ಸೇರ್ಪಡೆಯಾದ ಬಳಿಕ ಆರೋಪಿಗಳಲ್ಲಿ ಓರ್ವ ಇನ್‌ ಸ್ಟಾಗ್ರಾಮ್ ಮೂಲಕ ಆಕೆಯ ಸ್ನೇಹ ಬೆಳೆಸಿದ್ದ. 2023ರ ನವೆಂಬರ್‌ ನಲ್ಲಿ ಆಕೆಯ ಮನವೊಲಿಸಿ ಹೋಟೆಲ್ ಒಂದಕ್ಕೆ ಬೆಳಗಿನ ಉಪಾಹಾರಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಉದ್ದೇಶಪೂರ್ವಕವಾಗಿ ಆಕೆಯ ಬಟ್ಟೆಗೆ ಆಹಾರ ಚೆಲ್ಲಿ, ಅದನ್ನು ಶುಚಿ ಮಾಡಲು ಕೋಣೆಗೆ ಕರೆದುಕೊಂಡು ಹೋಗಿದ್ದ ಎಂದು ಎಫ್‌ ಐ ಆರ್‌ ನಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತೆ ಶೌಚಾಲಯದಲ್ಲಿ ಬಟ್ಟೆ ಬಿಚ್ಚಿದ್ದು, ಈ ವೇಳೆ ಆರೋಪಿ ವಿಶಾಲ್ ಚೌದರಿ ಅಲ್ಲಿಗೆ ನುಗ್ಗಿ ವಿಡಿಯೊ ಮಾಡಿದ್ದಾನೆ. ಆಕೆ ಪ್ರತಿಭಟಿಸಿದಾಗ, ವಿಡಿಯೋ ಬಹಿರಂಗ ಮಾಡುವುದಾಗಿ, ಇನ್‌ ಸ್ಟಾಗ್ರಾಮ್‌ ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ ಎಂದು ಎಫ್‌ ಐ ಆರ್‌ ನಲ್ಲಿ ಹೇಳಲಾಗಿದೆ.
ಇದೇ ವಿಡಿಯೋವನ್ನು ಬಳಸಿಕೊಂಡು, ಆರೋಪಿ ಹಾಗೂ ಆತನ ಸ್ನೇಹಿತರು 2023ರ ನವೆಂಬರ್‌ ನಿಂದ 2025ರ ಫೆಬ್ರುವರಿವರೆಗೆ ವಿವಿಧ ಸ್ಥಳಗಳಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.

ಕೊನೆಗೆ ವಿದ್ಯಾರ್ಥಿನಿ ಪಲಾನ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 7 ಮಂದಿ ವಿರುದ್ಧ ಬಿಎನ್‌ ಎಸ್‌ ಹಾಗೂ ಐಟಿ ಕಾಯ್ದೆಯಡಿ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ಮಗುವಿನೊಂದಿಗೆ ಹೇಮಾವತಿ ನಾಲೆಗೆ ಹಾರಿ ಇಡೀ ಕುಟುಂಬವೇ ಸಾಮೂಹಿಕ ಆತ್ಮಹತ್ಯೆ..! ಇಲ್ಲಿದೆ ಮನಕಲಕುವ ಘಟನೆ..!
  Ad Widget   Ad Widget   Ad Widget