ನ್ಯೂಸ್ ನಾಟೌಟ್: ಮದುವೆಯಾದ ಬಳಿಕ ಜೀನ್ಸ್ ಧರಿಸಲು ಬಿಡದೇ ಇರುವ ಕಾರಣಕ್ಕೆ ತಾಳಿ ಕಟ್ಟಿದ ಪತಿಯನ್ನೇ ಚಾಕುವಿಂದ ಇರಿದು ಪತ್ನಿ ಹತ್ಯೆಗೈದಿರುವ ಘಟನೆ ಜಾರ್ಖಂಡ್ನ ಜಮ್ತಾರಾದಲ್ಲಿ ನಡೆದಿದೆ.
ಜಮ್ತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಜೋರ್ಭಿತ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮಹಿಳೆಯನ್ನು ಪುಷ್ಪಾ ಹೆಂಬ್ರೋಮ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಪುಷ್ಪಾ ಹೆಂಬ್ರೋಮ್ ಜೀನ್ಸ್ ಧರಿಸಿ ಗೋಪಾಲಪುರ ಗ್ರಾಮದಲ್ಲಿ ಜಾತ್ರೆಯನ್ನು ನೋಡಲು ಹೋಗಿದ್ದಳು. ನಂತರ ಮನೆಗೆ ಹಿಂದಿರುಗಿದ ಪುಷ್ಪಾಳನ್ನು ಜೀನ್ಸ್ ಧರಿಸಿದ್ದ ಬಗ್ಗೆ ಪತಿ ಪ್ರಶ್ನಿದ್ದಾರೆ ಹಾಗೂ ಇಬ್ಬರ ನಡುವೆ ಇದೇ ವಿಚಾರವಾಗಿ ವಾಗ್ವಾದ ನಡೆದಿದೆ. ನಂತರ ಜಗಳ ವಿಕೋಪಕ್ಕೆ ತಿರುಗಿ ಪುಷ್ಪಾ ತನ್ನ ಗಂಡನಿಗೆ ಚಾಕುವಿನಿಂದ ಇರಿದಿದ್ದಾಳೆ. ಇದರಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕುಟುಂಬಸ್ಥರು ಧನ್ಬಾದ್ನಲ್ಲಿರು ಶಾಹಿದ್ ನಿರ್ಮಲ್ ಮಹತೋ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ್ದಾರೆ.