ನ್ಯೂಸ್ ನಾಟೌಟ್: ಸ್ಯಾಂಡಲ್‌ವುಡ್ ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬೆನ್ನಲ್ಲೆ ಡ್ರಗ್ ಕೇಸ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಈ ಇಬ್ಬರು ನಟಿಯರಿಗೆ ಸಿಸಿಬಿ ಬಿಗ್ ಶಾಕ್ ಕೊಟ್ಟಿದೆ.
ಡ್ರಗ್ ಕೇಸ್‌ನಲ್ಲಿ ಜಾಮೀನು ಪಡೆದು ಹೊರಬಂದಿರುವ ರಾಗಿಣಿ ಹಾಗೂ ಸಂಜನಾ ಅವರ ಕೇಸ್ ಮತ್ತೆ ಜೀವ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಇಬ್ಬರು ನಟಿಯರಿಗೆ ಎಫ್‌ಐಆರ್ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಡ್ರಗ್ ಕೇಸ್‌ನಲ್ಲಿ ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ನಟಿಯರು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್ ಎಫ್‌ಐಆರ್ ರದ್ದು ಮಾಡಿತ್ತು.
ಇದೀಗ ಸಿಸಿಬಿ ಹೈಕೋರ್ಟ್ ಎಫ್‌ಐಆರ್ ರದ್ದು ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಸಿಸಿಬಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಒಂದು ವೇಳೆ ಸಿಸಿಬಿ ಮನವಿಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದರೆ ಸ್ಯಾಂಡಲ್‌ವುಡ್ ನಟಿಯರಾದ ಸಂಜನಾ ಹಾಗೂ ರಾಗಿಣಿಗೆ ಮತ್ತೆ ಸಂಕಷ್ಟ ಶುರುವಾಗಲಿದೆ. ಮತ್ತೆ ತನಿಖೆ ಎದುರಿಸಬೇಕಾಗಿದೆ.
ಇದನ್ನೂ ಓದಿ:ಸುಮಲತಾ ಅಂಬರೀಶ್ ಅನ್ನು ಅನ್ ಫಾಲೋ ಮಾಡಿದ ನಟ ದರ್ಶನ್..! ಕುತೂಹಲ ಮೂಡಿಸಿದ ಸುಮಲತಾ ಪೋಸ್ಟ್..!
2020ರಲ್ಲಿ ರಾಗಿಣಿ ಬಂಧನವಾಗಿತ್ತು. ಡ್ರಗ್ಸ್ ಸುಳಿಯಲ್ಲಿ ಸಿಲುಕಿದ್ದ ರಾಗಿಣಿ ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ಇತ್ತೀಚೆಗಷ್ಟೆ ಈ ಪ್ರಕರಣ ಇತ್ಯಾರ್ಥವಾಗಿ ರಾಗಿಣಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಗದ ಬೆನ್ನಲ್ಲೆ ಈ ಪ್ರಕರಣದಲ್ಲಿ ರಾಗಿಣಿ ನಿರಪರಾಧಿ ಎಂದು ತೀರ್ಪು ಬಂದಿತ್ತು. ಇದರಿಂದ ರಾಗಿಣಿ ಬಿಗ್ ರಿಲೀಫ್ ಸಿಕ್ಕಂತಾಗಿತ್ತು. ಆದರೀಗ ಈ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು, ಅನುಮಾನದ ಮೇಲೆ ಸಿಸಿಬಿ ಮತ್ತೆ ಹೆಚ್ಚಿನ ತನಿಖೆಗೆ ಮುಂದಾಗಿದೆ.