ನ್ಯೂಸ್ ನಾಟೌಟ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ಪಾಂಡವಗಲ್ ಗ್ರಾಮದ ಬಳಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಎರಡು ಬೈಕ್ ಗಳಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಮಾನ್ವಿ ತಾಲೂಕಿನ ಒಂದೇ ಕುಟುಂಬದ ಮೂವರು ಸೇರಿದಂತೆ ಐವರು ಮೃತಪಟ್ಟಿದ್ದಾರೆ.
ಮಾನ್ವಿ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೇಮಾದ್ರಿ (55), ಪತ್ನಿ ನಾಗರತ್ನಮ್ಮ(48), ಪುತ್ರ ದೇವರಾಜು (25), ಆದೋನಿ ಮಂಡಲದ ಕುಪ್ಪಗಲು ಗ್ರಾಮದ ಈರಣ್ಣ, ಪತ್ನಿ ಆದಿಲಕ್ಷ್ಮಿ ಮೃತರು ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.