Latest

ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಗರಿಷ್ಠ ತೂಕದ ಮಗು ಜನನ!! ಮಗುವಿನ ತೂಕ ನೋಡಿ ತಾಯಿ ಜತೆಗೆ ಸ್ವತಃ ವೈದ್ಯರೇ ಶಾಕ್!!

1.2k
Spread the love

ನ್ಯೂಸ್‌ ನಾಟೌಟ್: ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಗರಿಷ್ಠ ತೂಕದ ಮಗು ಜನನವಾಗಿದೆ.ಹೌದು, ಈ ಮಗುವಿನ ತೂಕ ನೋಡಿ ತಾಯಿ ಜತೆಗೆ ಸ್ವತಃ ವೈದ್ಯರೇ ಶಾಕ್ ಆಗಿದ್ದಾರೆ.ಸಾಮಾನ್ಯವಾಗಿ ಮಗುವಿನ ತೂಕ ಮೂರುವರೆ ಕೆಜಿ ಇರುತ್ತೆ ಆದರೆ ಕೆಲವೊಮ್ಮೆ ನಾಲ್ಕು ಕೆಜಿಯೂ ಇರಬಹುದು. ಈ ಮಗುವಿನ ತೂಕ ಬರೋಬ್ಬರಿ 6 ಕೆಜಿ ಅಂದ್ರೆ ನೀವು ನಂಬಲೇ ಬೇಕು.

ಅಮೆರಿಕದ ಅಲಬಾಮದದಲ್ಲಿ ಈ ಘಟನೆ ವರದಿಯಾಗಿದೆ. ತಾಯಿಯೊಬ್ಬರಿಗೆ ಬರ್ಮಿಂಗ್ ಹ್ಯಾಮ್‌ನ ಡೆಲಿವರಿ ಡ್ರೈವರ್ ಪಮೇಲಾ ಮೈನ್ ಸಿಸೇರಿಯನ್ ಮೂಲಕ ಮಗಳು ಪ್ಯಾರಿಸ್ ಹಲೋಗೆ ಜನ್ಮ ನೀಡಿದರು. ಅಲಾಬಮಾ ಗ್ರ್ಯಾಂಡ್ ವ್ಯೂ ವೈದ್ಯಕೀಯ ಕೇಂದ್ರದಲ್ಲಿ ಪಮೇಲಾ ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾನ್ಯವಾಗಿ ಸಾಮಾನ್ಯವಾಗಿ 6 ಕೆಜಿ ತೂಕ ಬರಲು ಹುಟ್ಟಿದ ಮಗು ಕನಿಷ್ಠ 6 ತಿಂಗಳು ಆಗಿರಬೇಕು.ಈ ಮಗು ಹುಟ್ಟುವಾಗಲೇ ೬ ಕೆಜಿ ತೂಕವಿತ್ತು.ಮಗುವಿನ ಆಗಮನವಾಗುತ್ತಿದ್ದಂತೆ ಹೆರಿಗೆ ಕೋಣೆಯಲ್ಲಿದ್ದವರೆಲ್ಲಾ ಆಶ್ಚರ್ಯಚಕಿತರಾಗಿದ್ದಾರೆ.

ಮಗುವಿನ ಜನನಕ್ಕೆ ನಾಲ್ಕು ವಾರಗಳ ಮೊದಲು ಮಾಡಿದ ಸ್ಕ್ಯಾನ್‌ನಲ್ಲಿ ಮಗುವಿನ ತೂಕ 8 ಪೌಂಡ್ ಇರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ನಂತರದ ಮೌಲ್ಯಮಾಪನದಲ್ಲಿ ಮಗುವಿನ ತೂಕ 10 ಪೌಂಡ್ ಇರಬಹುದೆಂದು ಕಂಡುಹಿಡಿಯಲಾಯಿತು. ಆದರೆ, ಎರಡು ಬಾರಿ ಹೇಳಿದ್ದ ತೂಕಕ್ಕಿಂತಲೂ ಹೆಚ್ಚು ಮಗು ತೂಕವಿತ್ತು ಎಂದು ಪಮೇಲಾ ಹೇಳುತ್ತಾರೆ.ಆಸ್ಪತ್ರೆಯ ದಾದಿಯರು ಮಗುವನ್ನು ನೋಡಲು ಆಗಾಗ ಬರುತ್ತಿದ್ದರು, ಹುಟ್ಟಿದ ಮೂರು ದಿನಗಳಲ್ಲಿಯೇ ಅವಳು ಅಲ್ಲಿ ಫೇಮಸ್ ಆದಳು ಎಂದು ಪಮೇಲಾ ಹೇಳುತ್ತಾರೆ.ಡೆಲಿವರಿ ಟೈಮ್‌ ನಲ್ಲಿ ನರ್ಸ್ ಇದೇನಿದು ದೇವರೇ ಎಂದರು ಅಚ್ಚರಿಗೊಂಡಿದ್ದಾರೆ ಎಂದು ಪಮೇಲಾ ಹೇಳಿದ್ದಾರೆ. ಅವರ ಜೊತೆಗೆ  ತಾನೂ ಸಹ ಶಾಕ್ ಆದೆ ಎಂದು ಪಮೇಲಾ ಹೇಳಿದ್ದಾರೆ.ಆದರೆ ಮಗುವಿಗೆ ಹುಟ್ಟುವಾಗ ಈ ರೀತಿಯ ತೂಕ ಇರಲು ಕಾರಣವೇನು ಎಂಬುದು ತಿಳಿದಿಲ್ಲ ಎಂದು ಮಗುವಿನ ತಾಯಿ ಪಮೇಲಾ ಹೇಳುತ್ತಾರೆ

See also  ಪತ್ನಿಯ ತಂದೆಯ ವಾಟ್ಸಪ್ ನಲ್ಲಿ ತಲಾಖ್ ಸಂದೇಶ ಕಳುಹಿಸಿದ ಯುವಕ;ಯುವಕನನ್ನು ಊರಿಗೆ ಕರೆ ತರಲು ಪೊಲೀಸ್‌ ಯತ್ನ
  Ad Widget   Ad Widget   Ad Widget