Latestಕ್ರೈಂದೇಶ-ವಿದೇಶ

ನಾವು ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇವೆ ಎಂದು ಮೆಸೇಜ್ ಕಳುಹಿಸಿ ವಧು ನಾಪತ್ತೆ..! 5 ವರ್ಷ ಪ್ರೀತಿಸಿ ನಿಶ್ಚಯವಾಗಿದ್ದ ಮದುವೆ..!

720
Spread the love

ನ್ಯೂಸ್ ನಾಟೌಟ್: ಮದುವೆಗೆ ಕೆಲವೇ ಗಂಟೆ ಇರುವಾಗ ವಧುಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ.
ಪುಷ್ಪ ನಾಪತ್ತೆಯಾಗಿರುವ ವಧು ಎಂದು ಗುರುತಿಸಲಾಗಿದೆ.

ಪುಷ್ಪ ಮುಕೇಶ್‌ ಎನ್ನುವವನನ್ನು ಪ್ರೀತಿಸುತ್ತಿದ್ದಳು. 5 ವರ್ಷ ಪ್ರೀತಿಸಿದ ಬಳಿಕ ಮದುವೆಗೆ ಸಿದ್ದರಾಗಿದ್ದರು. ಆರಂಭದಲ್ಲಿ ಇಬ್ಬರ ಸಂಬಂಧಕ್ಕೆ ಎರಡೂ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಹಲವು ಬಾರಿ ಮಾತುಕತೆ ನಡೆಸಿ ಕೊನೆಗೂ ಮದುವೆ ನಿಶ್ಚಯ ಮಾಡಲಾಗಿತ್ತು.

ಮಾ.‌ 6 ರಂದು ಮದುವೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಮದುವೆಯ ಮುನ್ನ ಹಳದಿ ಸಮಾರಂಭ ಅದ್ಧೂರಿಯಾಗಿಯೇ ಎರಡೂ ಮನೆಯಲ್ಲಿ ನಡೆದಿತ್ತು.
ಮಾರ್ಚ್ 5 ರ ರಾತ್ರಿ ಅಂದರೆ ಮದುವೆಯ ಒಂದು ದಿನದ ಮುನ್ನ ಪುಷ್ಪ ಮುಕೇಶ್‌ಗೆ ವಾಟ್ಸಾಪ್‌ನಲ್ಲಿ ಮೆಸೇಜ್‌ ಮಾಡಿ ಆಕೆ ನಾಪತ್ತೆ ಆಗಿದ್ದಾಳೆ.
“ನಾವು ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇವೆ” ಎನ್ನುವ ಮಸೇಜ್‌ ಕಳುಹಿಸಿ ಮನೆ ಬಿಟ್ಟು ಹೋಗಿದ್ದಾಳೆ. ಈ ಸಂಬಂಧ ಮುಖೇಶ್ ಅವರ ತಾಯಿ ಖಡ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತಮ್ಮ ಭಾವಿ ಸೊಸೆಯನ್ನು ಹುಡುಕುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಇಬ್ಬರ ಸಂಬಂಧವನ್ನು ಮನೆಯಲ್ಲಿ ಅಷ್ಟು ಸುಲಭವಾಗಿ ಒಪ್ಪಿಲ್ಲ. ಆರಂಭದಲ್ಲಿ ಸಂಬಂಧವನ್ನು ವಿರೋಧಿಸಿದ ನಂತರ, ಎರಡೂ ಕುಟುಂಬಗಳು ಮದುವೆಗೆ ಒಪ್ಪಿಕೊಂಡಿತು. ಆದರೆ ವರನ ಕುಟುಂಬ ಹೆಚ್ಚಿನ ವರದಕ್ಷಿಣೆಗಾಗಿ ಒತ್ತಾಯಿಸಿದ್ದರು. ಇದರಿಂದ ಎರಡು ತಿಂಗಳ ಹಿಂದೆಯೇ ನಡೆಯಬೇಕಿದ್ದ ಮದುವೆ ರದ್ದಾಗುವಂತೆ ಮಾಡಿತ್ತು.. ಕುಟುಂಬಗಳು ರಾಜಿ ಸಂಧಾನ ಮಾಡಿಕೊಂಡರೂ ವರನ ಕಡೆಯವರು ಮತ್ತೆ ಹೊಸ ಬೇಡಿಕೆಗಳನ್ನಿಟ್ಟರು. ಇದು ಪುಷ್ಪಳಿಗೆ ತೀವ್ರ ಆತಂಕವನ್ನುಂಟು ಮಾಡಿತು ಎನ್ನಲಾಗಿದೆ.

See also  ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ..! ಘಟನೆ ನಡೆದದ್ದೆಲ್ಲಿ..?
  Ad Widget   Ad Widget   Ad Widget