Latest

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ , ರಿಕ್ಷಾ ಚಾಲಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ;ಫೆ.11ರಂದು ನಾಪತ್ತೆಯಾಗಿದ್ದ ಜೋಡಿ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆ

647
Spread the love

ನ್ಯೂಸ್ ನಾಟೌಟ್: ಫೆ. 11ರಿಂದ ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಮತ್ತು ಬಾಲಕಿ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾವೆ.ಕೇರಳದ ಕುಡಾಲುಮೇರ್ಕಳ ಗ್ರಾಮದ ಮಂಡೆಕಾಪುವಿನ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಮಂಡೆಕಾಪುವಿನ ದಿ| ಗಣಪತಿ ಅವರ ಪುತ್ರ, ರಿಕ್ಷಾ ಚಾಲಕ ಪ್ರದೀಪ್‌ (42) ಮತ್ತು ಮನೆಪಕ್ಕದ 15ರ ಹರೆಯದ ಹೈಸ್ಕೂಲು ವಿದ್ಯಾರ್ಥಿನಿ ಮನೆಯಿಂದ ಪರಾರಿಯಾಗಿದ್ದರು. ಮರುದಿನ ಬಾಲಕಿಯ ಮನೆಯವರು ಕುಂಬಳೆ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ಸಲ್ಲಿಸಿದ್ದರು. ಪೊಲೀಸರು ವಿವಿಧೆಡೆ ಹುಡುಕಾಡಿದರೂ ಆಕೆಯನ್ನು ಪತ್ತೆ ಹಚ್ಚಲಾಗಿಲ್ಲ.

ಈ ನಡುವೆ ಇವರಿಬ್ಬರ ಮೊಬೈಲ್‌ಗ‌ಳು ಕೂಡ ಸ್ವಿಚ್‌ ಆಫ್‌ ಆಗಿದ್ದವು. ಬಳಿಕ ಬಾಲಕಿಯ ಮನೆಯವರು ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಮತ್ತೆ ಸಕ್ರಿಯರಾದ ಪೊಲೀಸರು ವಿಶೇಷ ತಂಡ ರಚಿಸಿ ಡ್ರೋನ್‌ ಬಳಸಿ ಸ್ಥಳೀಯರ ಸಹಕಾರದೊಂದಿಗೆ ಹುಡುಕಾಡುತ್ತಿದ್ದಾಗ ಇಬ್ಬರೂ ಒಂದೇ ಮರದಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ನಾಪತ್ತೆಯಾದ ಕೆಲವೇ ದಿನಗಳಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.

See also  ಪುತ್ತೂರು:ಬಾಣಂತಿ ಹೊಟ್ಟೆಯಲ್ಲಿ ಬಟ್ಟೆ ಬಿಟ್ಟ ಪ್ರಕರಣ; ತಜ್ಞರಿಂದ ತನಿಖೆ ನಡೆಸಿ ವರದಿಗೆ ಆರೋಗ್ಯ ಸಚಿವ ಸೂಚನೆ
  Ad Widget   Ad Widget   Ad Widget