Latestದೇಶ-ವಿದೇಶವೈರಲ್ ನ್ಯೂಸ್

ಶೌಚಾಲಯ ಬಂದ್ ಆದ ಕಾರಣ10 ಗಂಟೆಗಳ ಹಾರಾಟದ ಬಳಿಕ ಹಿಂತಿರುಗಿದ ವಿಮಾನ..! ಪ್ರಯಾಣಿಕರಿಗೆ ಮತ್ತೆ ಉಚಿತ ಪ್ರಯಾಣ ಕಲ್ಪಿಸಿದ ಸಂಸ್ಥೆ..!

1.6k
Spread the love

ನ್ಯೂಸ್ ನಾಟೌಟ್: ಚಿಕಾಗೋದಿಂದ ದಿಲ್ಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುರುವಾರ(ಮಾ.6) ಹತ್ತು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ನಂತರ ತಾಂತ್ರಿಕ ಸಮಸ್ಯೆಗಳಿಂದಾಗಿ ಚಿಕಾಗೋಗೆ ಹಿಂದಿರುಗಬೇಕಾಯಿತು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ವಿಮಾನದ ಶೌಚಾಲಯಗಳು ಕಾರ್ಯನಿರ್ವಹಿಸದ ಕಾರಣ ಹಿಂದಿರುಗಬೇಕಾಯಿತು ಎಂದು ವರದಿ ತಿಳಿಸಿದೆ.

ಬೋಯಿಂಗ್ 777-337 ER ವಿಮಾನವು ಹತ್ತು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ನಂತರ ಚಿಕಾಗೋದ ORD ವಿಮಾನ ನಿಲ್ದಾಣಕ್ಕೆ ಮರಳಿತು. ಮೊದಲ ದರ್ಜೆ, ಬ್ಯುಸಿನೆಸ್ ಕ್ಲಾಸ್ ಮತ್ತು ಇಕಾನಮಿ ದರ್ಜೆಗಳಲ್ಲಿ 340 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುವ ಬೋಯಿಂಗ್ 777-300 ER ವಿಮಾನವು, ಪ್ರಥಮ ದರ್ಜೆ ಪ್ರಯಾಣಿಕರಿಗಾಗಿ ಗೊತ್ತುಪಡಿಸಿದ ಎರಡು ಸೇರಿದಂತೆ 10 ಶೌಚಾಲಯಗಳನ್ನು ಹೊಂದಿತ್ತು. ಅದರಲ್ಲಿ ಕೇವಲ ಒಂದು ಶೌಚಾಲಯ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು ಎಂದು ಮೂಲಗಳು ತಿಳಿಸಿದೆ.

“ಚಿಕಾಗೋದಲ್ಲಿ ಇಳಿದ ನಂತರ, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ತೊಂದರೆಯಾಗದಿರಲು ವಸತಿ ಸೌಕರ್ಯವನ್ನು ಒದಗಿಸಲಾಗಿದೆ. ಪ್ರಯಾಣಿಕರನ್ನು ಕಳುಹಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ” ಎಂದು ಏರ್ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಯಾಣಿಕರು ಟಿಕೆಟ್ ರದ್ದತಿ ಬಯಸಿದರೆ ಸಂಪೂರ್ಣ ಮರುಪಾವತಿ ಮತ್ತು ಮರು ಪ್ರಯಾಣ ಆರಿಸಿಕೊಂಡರೆ ಉಚಿತವಾಗಿ ಮರು ಪ್ರಯಾಣದ ಆಯ್ಕೆಗಳನ್ನು ನೀಡಲಾಗುವುದು ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿದೆ.

See also  ರಾಜ್ಯವೇ ಖುಷಿ ಪಡುವ ನ್ಯೂಸ್ ಕೊಟ್ಟವಳು ಈಗ ನಾಪತ್ತೆ, 100 ಜನರಿಗೆ ದಿವ್ಯಾ ವಸಂತಾ ಗ್ಯಾಂಗ್ ನಿಂದ ಪಂಗನಾಮ..!
  Ad Widget   Ad Widget   Ad Widget