Latest

ರಾಕಿಂಗ್ ಸ್ಟಾರ್ ಯಶ್ ಆಪ್ತಮಿತ್ರ ಕಿಡ್ನಿ ಸಮಸ್ಯೆಗೊಳಗಾಗಿ ಸಾವು!!ನಿರ್ದೇಶಕನಾಗಿ ಪರಿಚಯವಾಗೋ ಮುನ್ನವೇ ಇಹಲೋಕ ತ್ಯಜಿಸಿದ ಅರ್ಜುನ್ ಕೃಷ್ಣ!

221
Spread the love

ನ್ಯೂಸ್ ನಾಟೌಟ್:ಕೆಜಿಎಫ್ ಖ್ಯಾತಿಯ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಬಾಲ್ಯ ಸ್ನೇಹಿತ ಇಹ ಲೋಕ ತ್ಯಜಿಸಿದ್ದಾರೆ. ಯಶ್ ನಟರಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದರೆ ಈ ವ್ಯಕ್ತಿ ನಿರ್ದೇಶಕರಾಗಲು ಹೊರಟಿದ್ದರು. ಒಂದೊಂದೇ ಹಂತ ದಾಟಿ ಇದೀಗ ತಮ್ಮ ಮೊಟ್ಟಮೊದಲ ಚಿತ್ರದ ಶೂಟಿಂಗ್ ಕೂಡ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಅನಾರೋಗ್ಯದಿಂದ ಕಳೆದ ತಿಂಗಳು ಇಹಲೋಕ ತ್ಯಜಿಸಿದ್ದಾರೆ ಅನ್ನೋದು ವಿಪರ್ಯಾಸ. ಅವರ ಹೆಸರು ಅರ್ಜುನ್ ಕೃಷ್ಣ. 

ಮೂಲತಃ ಅರ್ಜುನ್ ಕೃಷ್ಣ ಮೈಸೂರಿನವರು. ಯಶ್ ಆಪ್ತ ಸ್ನೇಹಿತ. ಇನ್ನೂ ನಲವತ್ತು ವಯಸ್ಸು ನೋಡದ ಅರ್ಜುನ್ ಕೃಷ್ಣ ಅವರು ‘ಡ್ಯಾಡ್’ ಎಂಬ ಸಿನಿಮಾವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದರು. ಆದರೆ ವಿಧಿ ಲೀಲೆ ಎಂದರೆ ಇನ್ನೇನು 2-3 ತಿಂಗಳೊಳಗೆ ಈ ಚಿತ್ರವು ಬಿಡುಗಡೆಯಾಗಿ ಜಗತ್ತಿಗೆ ಅವರ ಹೆಸರು ಗೊತ್ತಾಗಲಿತ್ತು.. ಅಷ್ಟೋತ್ತಿಗಾಗಲೇ ಅವರು ಇನ್ನಿಲ್ಲವಾದರು.ಇವರು ಕನಸು ಕಟ್ಟಿಕೊಂಡೇ ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟರು.

ಆಗಿದ್ದೇನು?

ಅರ್ಜುನ್ ಕೃಷ್ಣ ಈ ವರ್ಷದ ಜನವರಿ ತಿಂಗಳಲ್ಲಿ ತಮ್ಮ ಡ್ಯಾಡ್ ಚಿತ್ರದ ಡಿಐ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗುವ ಖುಷಿಯಲ್ಲಿದ್ದರು. ಇದೇ ಹೊತ್ತಿನಲ್ಲಿ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡತೊಡಗಿತ್ತು. ಇದಕ್ಕಾಗಿ ಚಿಕಿತ್ಸೆ ಮೊರೆ ಹೋದರು. ಅವರಿಗೆ ಗಾಲ್ ಬ್ಲಾಡರ್ ಸ್ಟೋನ್ ಸಮಸ್ಯೆ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಸಿನಿಮಾ ಕೆಲಸ ಕಾರ್ಯಗಳಲ್ಲಿ ಮುಳುಗಿ ಹೋಗಿದ್ದ ಅರ್ಜುನ್ ಕೃಷ್ಣ, ಆಯುರ್ವೇದ ಔಷಧಿಯ ಮೊರೆ ಹೋಗಿದ್ದರು. ಸ್ವಲ್ಪ ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಮತ್ತೆ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು.ಆದರೆ, ಬಳಿಕ ಅವರಿಗೆ ಮತ್ತೊಂದು ಸುತ್ತಿನ ಆಘಾತ ಕಾಡಿದೆ. ಇದೇ ಫೆಬ್ರವರಿ ತಿಂಗಳಿನಲ್ಲಿ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳಿದಾಗ ಗಾಲ್ ಬ್ಲಾಡರ್ ಸ್ಟೋನ್ ಸಮಸ್ಯೆ ಉಲ್ಬಣಿಸಿ, ಅದರ ಸೋಂಕು ಫ್ಯಾಂಕ್ರಿಯಾಸ್ ಗೂ ಹಬ್ಬಿಕೊಂಡಿದೆ ಎಂಬ ಆಘಾತಕಾರಿ ವಿಚಾರವನ್ನು ವೈದ್ಯರು ಹೇಳಿದ್ದಾರೆ. ತಕ್ಷಣ ಅರ್ಜುನ್ ಕೃಷ್ಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು.

ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಅರ್ಜುನ್ ಕೃಷ್ಣ ಬೇಗನೆ ಮರಳುತ್ತಾರೆಂಬ ನಿರೀಕ್ಷೆ ಚಿತ್ರತಂಡದ್ದಾಗಿತ್ತು. ನಿರೀಕ್ಷೆಯೂ ಇತ್ತು, ಯಾಕೆಂದ್ರೆ ಕಿಡ್ನಿ ಸ್ಟೋನ್ ಅನ್ನುವಂಥದ್ದು ದೊಡ್ಡ ಮಾರಾಣಾಂತಿಕ ಕಾಯಿಲೆಯೇನೂ ಅಲ್ಲ. ಅದೊಂದು ಮಾಮೂಲಿ ಸಮಸ್ಯೆ. ಹೀಗಾಗಿ ಅವರು ವಾಪಾಸ್ ಬರುತ್ತಾರೆನ್ನುವ ನಿರೀಕ್ಷೆ ಎಲ್ಲರಲ್ಲೂ ಇತ್ತು.ಅವರ ಮನೆಮಂದಿ ಮತ್ತು ಸ್ನೇಹಿತರೂ ಕೂಡಾ ಹಾಗೆಯೇ ಅಂದುಕೊಂಡಿದ್ದರು. ಅರ್ಜುನ್ ಕೃಷ್ಣ ಹುಷಾರಾಗಿ ಬರೋದರೊಳಗೆ ಉಳಿದ ಕಾರ್ಯ ಮುಗಿಸಬೇಕೆಂದು ಇಡೀ ಚಿತ್ರತಂಡ ಹಗಲಿರುಳೂ ಕೆಲಸ ಮಾಡುತ್ತಿತ್ತು. ಆದರೆ, ಶಿವರಾತ್ರಿಯ ಹಿಂದಿನ ದಿನ ಅಂದರೆ, ಫೆಬ್ರವರಿ 25ರಂದು, ನಿರ್ದೇಶಕರಾಗಲಿದ್ದ ಅರ್ಜುನ್ ಕೃಷ್ಣ ಇನ್ನಿಲ್ಲವೆಂಬ ಸುದ್ದಿ ಬಂದೆರಗಿತ್ತು. ಗಾಲ್ ಬ್ಲಾಡರಿನಿಂದ ಫ್ಯಾಂಕ್ರಿಯಾಸ್ ಗೆ ಹಬ್ಬಿಕೊಂಡಿದ್ದ ಸೋಂಕು ತೀವ್ರ ಸ್ವರೂಪ ಪಡೆದ ಪರಿಣಾಮವಾಗಿ, ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿ ಅರ್ಜುನ್ ಅವರ ಉಸಿರು ನಿಂತೇ ಹೋಯಿತು.

  Ad Widget   Ad Widget   Ad Widget