Latestಕ್ರೈಂವೈರಲ್ ನ್ಯೂಸ್

ತ್ರಿಬಲ್‌ ರೈಡಿಂಗ್‌ ವೇಳೆಯೇ ಯುವಕ-ಯುವತಿ ಕಿಸ್ಸಿಂಗ್..! ಪ್ರಶ್ನಿಸಿದ ಸವಾರನಿಗೆ ಯುವಕರಿಂದ ಧಮ್ಕಿ..!

894
Spread the love

ನ್ಯೂಸ್ ನಾಟೌಟ್ : ಇಬ್ಬರು ಯುವಕರು ಹಾಗೂ ಯುವತಿ ದ್ವಿಚಕ್ರ ವಾಹನದಲ್ಲಿ ತ್ರಿಬಲ್‌ ರೈಡಿಂಗ್‌ ಮಾಡುತ್ತಾ ಅಸಭ್ಯವಾಗಿ ವರ್ತಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಬೆನ್ನಲ್ಲೇ ಬೆಂಗಳೂರು ಸಂಚಾರ ಪೊಲೀಸರು ಆ ದ್ವಿಚಕ್ರ ವಾಹನದ ಮಾಲೀಕನನ್ನು ಪತ್ತೆಹಚ್ಚಿ ದಂಡ ವಿಧಿಸಿದ್ದಾರೆ. ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ಫೆ.7ರಂದು ರಾತ್ರಿ ಈ ಘಟನೆ ನಡೆದಿತ್ತು, ಈಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಒಂದು ದ್ವಿಚಕ್ರ ವಾಹನದಲ್ಲಿ ಇಬ್ಬರು ಯುವಕರು ಹಾಗೂ ಒಬ್ಬ ಯುವತಿ ರಾಗಿಗುಡ್ಡ ಬಸ್‌ ನಿಲ್ದಾಣದ ಕಡೆಯಿಂದ ಮೆಟ್ರೋ ನಿಲ್ದಾಣದ ಕಡೆಗೆ ತ್ರಿಬಲ್‌ ರೈಡಿಂಗ್‌ ನಲ್ಲಿ ಹೊರಟ್ಟಿದ್ದರು. ಈ ವೇಳೆ ಒಬ್ಬ ಯುವಕ ದ್ವಿಚಕ್ರ ವಾಹನ ಚಲಾಯಿಸಿದರೆ, ಆತನ ಹಿಂದೆ ಕುಳಿತ್ತಿದ್ದ ಯುವಕ ಮತ್ತು ಯುವತಿ, ಬೈಕ್‌ ಚಾಲನೆ ವೇಳೆ ಪರಸ್ಪರ ಚುಂಬಿಸಿಕೊಂಡು ಅಸಭ್ಯವಾಗಿ ವರ್ತಿಸಿದ್ದರು.

ಈ ಹುಚ್ಚಾಟದ ದೃಶ್ಯವನ್ನು ಅವರ ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಅಲ್ಲದೆ, ಅದನ್ನು ಪ್ರಶ್ನಿಸಿದ ಆ ಸವಾರನಿಗೆ ಯುವಕರು ಧಮ್ಕಿ ಹಾಕಿದ್ದರು. ಈ ಬೆನ್ನಲ್ಲೇ ಸಂಚಾರ ಪೊಲೀಸರು ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕನನ್ನು ಪತ್ತೆಹಚ್ಚಿ ದಂಡ ವಸೂಲಿ ಮಾಡಿದ್ದಾರೆ.

See also  ಮತ್ತೆ ಸದ್ದು ಮಾಡುತ್ತಿರುವ ಮಥುರಾ ಕೃಷ್ಣ ಜನ್ಮಭೂಮಿ ವಿವಾದ..! ಮಸೀದಿ ಪರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌
  Ad Widget   Ad Widget   Ad Widget