ನ್ಯೂಸ್ ನಾಟೌಟ್: ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪತ್ನಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸ್ನೇಹಿತೆಯರ ಜೊತೆ ದೇಗುಲಕ್ಕೆ ಭೇಟಿ ನೀಡಿದ ದುರ್ಗಾ ಸ್ಟಾಲಿನ್, ಮೂಕಾಂಬಿಕೆಯ ದರ್ಶನ ಮಾಡಿದರು. ದುರ್ಗಾ ಕೊಲ್ಲೂರು ಮೂಕಾಂಬಿಕೆಯ ಭಕ್ತರಾಗಿದ್ದಾರೆ.
ತಮಿಳುನಾಡು ಸಿಎಂ ಪತ್ನಿ ಜೊತೆಗೆ ಬಂದಿದ್ದ ಅವರ ಸ್ನೇಹಿತರೆಯರು ಮೂಕಾಂಬಿಕಾ ದೇವಿಗೆ ಚಿನ್ನದ ಕಿರೀಟ ಅರ್ಪಣೆ ಮಾಡಿದ್ದಾರೆ. ಖಾಸಗಿಯಾಗಿ ದೇವಿಗೆ ಕಿರೀಟ ಅರ್ಪಿಸಿ ದೇವಿ ಕೃಪೆಗೆ ಪಾತ್ರರಾಗಿದ್ದಾರೆ.
ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನಿರಂತರವಾಗಿ ಟೀಕಾಪ್ರಹಾರ ನಡೆಸಿದ್ದಾರೆ. ‘ಸನಾತನ ಧರ್ಮ ಮಲೇರಿಯಾ ಇದ್ದಂತೆ.. ಅದನ್ನು ನಿರ್ಮೂಲನೆ ಮಾಡಬೇಕು’ ಎಂದು ಡಿಸಿಎಂ ಉದಯನಿಧಿ ಹೇಳಿಕೆ ನೀಡಿದ್ದರು. ವಿವಾದಿತ ಹೇಳಿಕೆಯು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಮನೆಯವರ ಇಂತಹ ಹೇಳಿಕೆಗಳಿಂದ ದುರ್ಗಾ ಸ್ಟಾಲಿನ್ ಅಂತರ ಕಾಯ್ದುಕೊಂಡಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಮನೆಯವರ ವಿಚಾರಧಾರೆ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ದಕ್ಷಿಣ ಭಾರತದ ವಿವಿಧ ದೇಗುಲಗಳಿಗೆ ಭೇಟಿ ನೀಡಿ, ಕೊಡುಗೆಗಳಿಂದ ದೈವ ಭಕ್ತೆ ಎನಿಸಿಕೊಂಡಿದ್ದಾರೆ.