ನ್ಯೂಸ್ ನಾಟೌಟ್:ಸೆಕೆಗಾಲದಲ್ಲಿ ಹೆಚ್ಚಾಗಿ ಜನ ತಂಪು ಪಾನೀಯ, ಐಸ್ ಕ್ರಿಮ್ ಗಳ ಮೊರೆ ಹೋಗುವುದು ಜಾಸ್ತಿ. ಅದೂ ಈಗಿನ ಬಿಸಿಲಿನ ತಾಪಮಾನಕ್ಕೆ ನೀರು ಕುಡಿದು ಕುಡಿದು ಸಾಕಾಗಿ ಹೋದಾಗ ಒಮ್ಮೆ ತಂಪು ಪಾನೀಯವನ್ನು ಸೇವಿಸೋಣ ಅನ್ನಿಸಿಬಿಡುತ್ತೆ. ಇದಕ್ಕಾಗಿ ಐಸ್ ಕ್ರೀಂ ಸೇರಿದಂತೆ , ಪಾನೀಯವನ್ನು ಸೇವಿಸುತ್ತೀವಿ.
ಇದೀಗ ಇಲ್ಲೊಬ್ಬ ವ್ಯಕ್ತಿ ಪೇಟೆಗೆಂದು ಬಂದವನು ಬೀದಿ ಬದಿ ಇದ್ದ ಐಸ್ ಕ್ರೀಮ್ ಅಂಗಡಿಯಲ್ಲಿ ಐಸ್ ಕ್ಯಾಂಡಿ ಖರೀದಿಸಿ ತಿನ್ನಲು ಹೋಗಿ ಬೆಚ್ಚಿ ಬಿದ್ದಿದ್ದಾನೆ. ಅಷ್ಟಕ್ಕೂ ಬೆಚ್ಚಿ ಬೀಳೋದ್ಯಾಕೆ ಅಂತ ಯೋಚಿಸುತ್ತಿರಬಹುದು. ಹೌದು, ಆತ ಖರೀದಿಸಿದ ಐಸ್ ಕ್ಯಾಂಡಿಯಲ್ಲಿ ಹಾವಿನ ಮರಿಯೊಂದು ಐಸ್ ನಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಕಂಡು ಬಂದಿದೆ.ಇದನ್ನು ನೋಡಿದ ಗ್ರಾಹಕ ಗಾಬರಿಗೊಂಡಿದ್ದಾನೆ.ಸದ್ಯ ಗ್ರಾಹಕ ಖರೀದಿಸಿದ ಐಸ್ ಕ್ಯಾಂಡಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.
ಘಟನೆ ಎಲ್ಲಿ?
ಅಸಲಿಗೆ ಈ ಘಟನೆ ನಡೆದಿದ್ದು ಥಾಯ್ಲೆಂಡ್ ನಲ್ಲಿ ವಾಸ್ತವವಾಗಿ ಇಲ್ಲಿನ ಜನರಿಗೆ ಇದೆಲ್ಲಾ ಸಾಮಾನ್ಯ ವಿಚಾರ ಆದರೂ ರೇಬನ್ ನಕ್ಲೆಂಗ್ ಬೂನ್ ಎಂಬ ವ್ಯಕ್ತಿ ಥಾಯ್ಲೆಂಡ್ ನ ಮುಯಾಂಗ್ ರಾಚಬುರಿಯಲ್ಲಿರುವ ಐಸ್‌ಕ್ರೀಂ ಅಂಗಡಿಯಲ್ಲಿ ಐಸ್ ಕ್ಯಾಂಡಿ ಖರೀದಿಸಿ ಇನ್ನೇನು ಕವರ್ ತೆರೆದು ತಿನ್ನಬೇಕು ಎನ್ನುವಷ್ಟರಲ್ಲಿ ಕ್ಯಾಂಡಿ ಮೇಲೆ ಏನೋ ಇರುವುದು ಕಂಡು ಬಂದಿದೆ. ಸರಿಯಾಗಿ ಗಮನಿಸಿದಾಗ ಅದರಲ್ಲಿ ಸಣ್ಣ ಹಾವು ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಇರುವುದು ಕಂಡಿದೆ.ಕೂಡಲೇ ಇದರ ಫೋಟೋ ತೆಗೆದ ಗ್ರಾಹಕ ಫೇಸ್ ಬುಕ್ ನಲ್ಲಿ ದೃಶ್ಯಗಳನ್ನು ಪೋಸ್ಟ್ ಮಾಡಿದ್ದಾನೆ, ಸದ್ಯ ವೈರಲ್ ಆಗುತ್ತಿರುವ ಪೋಸ್ಟ್ ಗೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ಸ್ ಗಳನ್ನು ಮಾಡಿದ್ದಾರೆ.
View this post on Instagram