ನ್ಯೂಸ್ ನಾಟೌಟ್: ದಳಪತಿ ವಿಜಯ್ ದಕ್ಷಿಣದ ಸೂಪರ್ಸ್ಟಾರ್ ಎಂದೇ ಪ್ರಸಿದ್ದಿ ಪಡೆದಿದ್ದಾರೆ. ಸದ್ಯ ಸಿನಿಮಾ ಹಾಗೂ ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಇದ್ದರೂ , ಫುಲ್ ಟೈಮ್ ರಾಜಕೀಯದಲ್ಲೇ ತೊಡಗಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಇವರ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ಕಂಡು ಕೆಲ ಅಭಿಮಾನಿಗಳು ವಿಜಯ್ ಅವರನ್ನು ಹೊಗಳಿದರೆ, ವಿರೋಧಿಗಳು ಅವರ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ದಳಪತಿ ವಿಜಯ್ ಅವರು 2026ರ ತಮಿಳುನಾಡು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ಇದಕ್ಕಾಗಿ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷ ಸ್ಥಾಪನೆ ಮಾಡಿದ್ದಾರೆ. ಇದೀಗ ವೈರಲ್ ಆದ ವಿಡಿಯೋದಲ್ಲಿ ವಿಜಯ್ ಅವರು ತಲೆಗೆ ಟೋಪಿ ಹಾಕಿ ಇಫ್ತಾರಿ ಕೂಟದಲ್ಲಿ ಭಾಗಿ ಆಗಿದ್ದಲ್ಲದೇ ಮುಸ್ಲಿಂ ಸಂಪ್ರದಾಯದಂತೆ ನಡೆದುಕೊಂಡಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ಕೆಲವರು ಇದನ್ನು ಹೊಗಳಿ ಎಲ್ಲಾ ಧರ್ಮವನ್ನು ವಿಜಯ್ ಗೌರವಿಸುತ್ತಿದ್ದಾರೆ ಎಂದು ಸಂತಸ ಹೊರಹಾಕಿದ್ದಾರೆ. ಆದರೆ, ಅವರ ವಿರೋಧಿಗಳು ‘ವೋಟ್ ಬ್ಯಾಂಕ್ ರಾಜಕೀಯ’ ಎಂದು ಟೀಕಿಸಿದ್ದಾರೆ.
ಕೆಲ ವರದಿಗಳ ಪ್ರಕಾರ ವಿಜಯ್ ಅವರು ಇದಕ್ಕಾಗಿ ಮುಂಜಾನೆಯಿಂದಲೇ ಸಿದ್ಧರಾಗಿದ್ದರು ಎಂದು ಹೇಳಲಾಗಿದೆ. ಅಂದರೆ ಮುಂಜಾನೆಯಿಂದ ಉಪವಾಸ ಮಾಡಿದ್ದರು ಎನ್ನಲಾಗಿದೆ. ನಂತರ ರಾತ್ರಿ ವೇಳೆ ಅವರು ಊಟ ಸೇವನೆ ಮಾಡಿದ್ದಾರೆ. ವಿಜಯ್ ಜೊತೆ ಹಲವು ಸ್ಥಳೀಯ ಮುಸ್ಲಿಂ ನಾಯಕರು ಭಾಗಿ ಆಗಿದ್ದು,ವಿಜಯ್ ಅವರು ಭಾಗಿ ಆದ ಇಫ್ತಾರ್ ಕೂಟದಲ್ಲಿ 3 ಸಾವಿರಕ್ಕೂ ಅಧಿಕ ಜನ ಸೇರಿದ್ದರೆಂದು ವರದಿ ತಿಳಿಸಿದೆ. ಸದ್ಯವಿಜಯ್ ಅವರು ಯಾವುದೇ ಪಕ್ಷದ ಜೊತೆ ಒಪ್ಪಂದ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
#WATCH | Tamilaga Vettri Kazhagam (TVK) founder and chief Vijay hosts 'Iftar' during Ramzan month in Chennai pic.twitter.com/JLDkfbwLZJ
— ANI (@ANI) March 7, 2025