ನ್ಯೂಸ್ ನಾಟೌಟ್:ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಬಗ್ಗೆ ನಿಮ್ಗೆ ಗೊತ್ತೆ ಇದೆ.ರಿಯಾಲಿಟೀ ಶೋ ಸೇರಿದಂತೆ ಇನ್ಸ್ಟಾಗ್ರಾಮ್ ನಲ್ಲಿ ಆಕ್ಟೀವ್ ಆಗಿದ್ದರು.ಇದೀಗ ಅವರು ಹಾಟ್ ವಾಟರ್ ಸ್ಟೀಮ್ ತಗೊಂಡಿದ್ದು,ಈ ಬಿಸಿ ನೀರು ಕೈ ತಪ್ಪಿ ಕಾಲು ಮೇಲೆ ಬಿದ್ದಿದ್ದು,ಕಾಲಿನಲ್ಲಿ ಗುಳ್ಳೆಗಳು ಎದ್ದಿವೆ. ಈ ವೇಳೆ ಯಶಸ್ವಿನಿ ಪತಿ ಮಾಸ್ಟರ್ ಆನಂದ್ ಅವರು ಹಂಪಿ ಉತ್ಸವಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ.
ಯಶಸ್ವಿನಿ ಅವರ ಕಾಲುಗಳ ಮೇಲೆ ದೊಡ್ಡ ಗುಳ್ಳೆಗಳು ಆದಹಾಗೆ ಆಗಿದ್ದು, ಗುಳ್ಳೆಗಳು ಏಳುವ ಮುನ್ನ ಬಿಸಿ ನೀರು ಬಿದ್ದಂತೆ ಸಂತು ಎಂಬವರ ನೆರವಿನಿಂದ ಆಸ್ಪತ್ರೆಗೆ ಹೋದರು. ಗಾಯವನ್ನು ವೀಕ್ಷಿಸಿದ ವೈದ್ಯರು ಅದಕ್ಕೆ ಬ್ಯಾಂಡಜ್ ಹಾಕಿದ್ದಾರೆ. ಆದರೆ ಮರು ದಿನ ಬೆಳಗ್ಗೆ ನೋಡಿದಾಗ ಕಾಲುಗಳ ಮೇಲೆ ತುಂಬಾ ಗುಳ್ಳೆಗಳು ಎದ್ದಿದ್ದವು ಎನ್ನಲಾಗಿದೆ. ಬಳಿಕ ಹಂಪಿ ಉತ್ಸವಕ್ಕೆ ತೆರಳಿದ್ದ ಮಾಸ್ಟರ್ ಆನಂದ್ ಅವರು ಯಶಸ್ವಿನಿ ಅವರನ್ನು ನೋಡಿ ಶಾಕ್ ಆಗಿದ್ದು ಕೂಡಲೇ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ವೇಳೆ ವೈದ್ಯರೊಂದಿಗೆ ಮಾತನಾಡಿದ ಯಶಸ್ವಿನಿ ಅವರು “ಕಾಲುಗಳ ಮೇಲೆ ಗುಳ್ಳೆಗಳು ಆಗಿವೆ, ಒಮ್ಮೆ ನೋಡಿ” ಎಂದು ಹೇಳಿದ್ದಾರೆ. ವೈದ್ಯರು ಬ್ಯಾಂಡೇಜ್ ಬಿಚ್ಚುತ್ತಿದ್ದ ಹಾಗೆ ದೊಡ್ಡ ದೊಡ್ಡ ಗುಳ್ಳೆಗಳು ಕಂಡು ಬಂದಿದ್ದು , ಆ ಗುಳ್ಳೆಗಳನ್ನು ಒಡೆದು ಔಷಧಿ ಹಚ್ಚಲಾಯ್ತು.. ಇದೀಗ ಯಶಸ್ವಿನಿಯವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ಮಾಸ್ಟರ್ ಆನಂದ್ ಪತ್ನಿ “ನನಗೆ ಹುಷಾರಾಗಿಲ್ಲ. ಯಾರ ಕಣ್ಣು ಬಿತ್ತೋ ಏನೋ! ಈ ಥರ ಆಯ್ತು, ಆಗಿದ್ದೆಲ್ಲ ಒಳ್ಳೆಯದಕ್ಕೆ ಅಂತ ಭಾವಿಸ್ತೀನಿ. ನಾನು ಬೇಗ ಹುಷಾರ್ ಆಗ್ತೀನಿ ಅಲ್ವಾ?” ಎಂದು ಈ ವಿಷಯವನ್ನು ಹಂಚಿಕೊಂಡಿದ್ದಾರೆ.ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದು, ಯಾರ ಕಣ್ಣು ಬಿತ್ತೋ ಏನೋ ಮೇಡಂ. ಬೇಗ ಹುಷಾರಾಗಿ. ದೇವ್ರಿದ್ದಾನೆ ನಿಮಗೆ ಯಾರ ಕಣ್ಣು ಬಿದ್ರು ಕಾಪಾಡೋನು ಆ ಭಗವಂತ ಮಾತ್ರ. ನನಗೆ ಬಹಳ ಕಷ್ಟ ಆಗ್ತಿದೆ ನೋಡಲು…. ತುಂಬ ಗಾಯ ಆಗಿದೆ ಎಂದಿದ್ದಾರೆ.