Latest

ಕೇರಳ: ಕಡಲ ತೀರಕ್ಕೆ ತನ್ನಷ್ಟಕ್ಕೆ ಹಾರಿ ಬಂದು ಬೀಳುತ್ತಿರುವ ಲಕ್ಷಾಂತರ ಮೀನುಗಳು!! ಸುನಾಮಿ ಮುನ್ಸೂಚನೆ ಆಗಿರಬಹುದೇ? ಪರಿಸರ ತಜ್ಞರು ಹೇಳಿದ್ದೇನು?ವಿಡಿಯೋ ವೀಕ್ಷಿಸಿ

757
Spread the love

ನ್ಯೂಸ್‌ ನಾಟೌಟ್: ದೇವರ ನಾಡು ಕೇರಳದ ಈ ದೃಶ್ಯಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಈ ಅಪರೂಪದ ಪ್ರಾಕೃತಿಕ ವಿದ್ಯಮಾನ ನೋಡಿ ಇದು ಯಾತಕ್ಕಾಗಿರಬಹುದು ಎಂದು ತಲೆಗೆ ಬಿಟ್ಟವರಂತೆ ಚಿಂತಿಸುತ್ತಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಮೀನುಗಳು ತಮ್ಮಷ್ಟಕ್ಕೆ ತಾವೇ ಸಮುದ್ರ ತೀರಕ್ಕೆ ತೇಲಿಬಂದು ಬಿದ್ದಿದ್ದು, ಇದರ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಅಚ್ಚರಿ ಪಟ್ಟಿದ್ದಾರೆ. ಸದ್ಯ ಇದು ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.

ಸದ್ಯ ಕೇರಳದ ಕೊಚ್ಚಿಯ ಕಡಲತೀರ ಈ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದು, ಸ್ಥಳೀಯರು ಹೀಗೆ ಅಪರೂಪಕ್ಕೆ ಸಿಕ್ಕ ಮೀನುಗಳನ್ನು ತೀರದಿಂದ ಹೆಕ್ಕುವುದರಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಈ ಪ್ರಕೃತಿ ವೈಚಿತ್ರ್ಯಕ್ಕೆ ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ವಿದ್ಯಮಾನಕ್ಕೆ ಚಕರ ಎಂದು ಕರೆಯಲಾಗುತ್ತಿದ್ದು, ಸಂಭವನೀಯ ಪರಿಸರ ಬದಲಾವಣೆಗಳಿಂದ ಈ ನೈಸರ್ಗಿಕ ವಿದ್ಯಮಾನ ಉಂಟಾಗಿದೆ ಎಂದು ನಂಬಲಾಗಿದೆ. 

ಹಾಗಾದರೆ ಇದು ಯಾಕಾಗುತ್ತೆ, ಸ್ಥಳೀಯರು ಈ  ವೈಚಿತ್ರ್ಯಕ್ಕೆ ‘ಚಕರ’ ಎಂಬ ನೈಸರ್ಗಿಕ ವಿದ್ಯಮಾನ ಕಾರಣವೆಂದು ಹೇಳುತ್ತಾರೆ, ಅಲ್ಲಿ ಪೌಷ್ಟಿಕಯತೆಯಿಂದ ಸಮೃದ್ಧವಾದ ನೀರು ಕರಾವಳಿಯ ಬಳಿ ಮೀನುಗಳ ದೊಡ್ಡ ಗುಂಪುಗಳನ್ನು ಆಕರ್ಷಿಸುತ್ತದೆ. ಇದರಿಂದಾಗಿ ಅವು ಅನಿರೀಕ್ಷಿತವಾಗಿ ದೊಡ್ಡ ಪ್ರಮಾಣದಲ್ಲಿ ದಡಕ್ಕೆ ಹಾರುತ್ತವೆ. ಈ ಘಟನೆಯು ಸ್ಥಳೀಯರು ಮತ್ತು ಪರಿಸರ ತಜ್ಞರಿಬ್ಬರನ್ನೂ ಅಚ್ಚರಿಗೊಳಿಸಿದೆ.ಮೀನು ಸಂಗ್ರಹಿಸುವ ಮಾರಾಟ ಮಾಡುವ ಕೆಲವು ಸ್ಥಳೀಯರು ಈ ಹಠಾತ್ ಮೀನುಗಳ ಒಳಹರಿವನ್ನು ಒಂದು ವರದಾನವೆಂದು ಪರಿಗಣಿಸಿದ್ದಾರೆ. ಆದರೆ  ಇತರರು ಇಂತಹ ಪ್ರಾಕೃತಿಕ ವೈಚಿತ್ರ್ಯವೂ ಮುಂದೆ ನಡೆಯಲಿರುವ ಸಂಭಾವನೀಯ ಪ್ರಕೃತಿ ವಿಕೋಪದ ಮುನ್ಸೂಚನೆ ಇರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 

ಇದಕ್ಕೆ ನೆಟ್ಟಿಗರು ಬೇರೆಯದ್ದೆ ಅರ್ಥವನ್ನು ನೀಡುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿ ಈ ಘಟನೆಯನ್ನು ಬಣ್ಣಿಸಿದ್ದಾರೆ. ಏನೋ ಭಯಾನಕವಾದುದು ಶೀಘ್ರದಲ್ಲೇ ಸಂಭವಿಸಲಿದೆ ಎಂದು ಒಬ್ಬರು ವೀಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ. ಈ ರೀತಿಯ ವಿದ್ಯಮಾನ ಜಪಾನ್‌ನಲ್ಲೂ ಆಗಿತ್ತು. ಜಪಾನಿ ಸಂಸ್ಕೃತಿಯಲ್ಲಿ ಈ ರೀತಿ ಘಟನೆಗಳು ಕಂಡು ಬಂದರೆ ಅದನ್ನು ಸುನಾಮಿ ಅಥವಾ ಭೂಕಂಪನದ ಮುನ್ಸೂಚನೆ ಎಂದು ನಂಬಲಾಗುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಇದಕ್ಕೆ ಕಾರಣ ಏನಿರಬಹುದು ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಇದಕ್ಕೆ ಮತ್ತೊಬ್ಬರು ಪ್ರತಿಕ್ರಿಯಿಸಿದ್ದು, ಮೆಕ್ಸಿಕೋದಲ್ಲೂ ಕೂಡ ಇದೇ ರೀತಿ ಪ್ರಾಕೃತಿಕ ವಿಕೋಪ ಸಂಭವಿಸುವ ಮುನ್ಸೂಚನೆ ಎಂದು ನಂಬುತ್ತಾರೆ ಎಂದು ಹೇಳಿದ್ದಾರೆ. 

 

 

View this post on Instagram

 

A post shared by Times Now (@timesnow)

 

 

 

 

View this post on Instagram

 

A post shared by News not out (@newsnotout)

  Ad Widget   Ad Widget   Ad Widget   Ad Widget