ನ್ಯೂಸ್ ನಾಟೌಟ್ : ಕನ್ನಡದ ಅತ್ಯಂತ ಬಿಗ್ ರಿಯಾಲಿಟೀ ಶೋಗಳಲ್ಲಿ ಬಿಗ್ ಬಾಸ್ ಕನ್ನಡ (Bigg Boss Kannada) ಕೂಡ ಒಂದು. ಇದೀಗ 11ನೇ ಸೀಸನ್ ಮುಕ್ತಾಯ ಕಂಡು ಕೆಲ ತಿಂಗಳುಗಳೇ ಕಳೆದಿದೆ.ಕಿಚ್ಚ ಸುದೀಪ್ ಅವರು ಇನ್ಮುಂದೆ ಬಿಗ್ ಬಾಸ್ ಹೋಸ್ಟ್ ಆಗಲ್ಲ ಆಂದಿದ್ದಾರೆ. ಹಾಗಾದರೆ ಬಿಗ್ ಬಾಸ್ ಮುಂದಿನ ಸೀಸನ್ ಗೆ ನಿರೂಪಕ ಯಾರು ಎನ್ನುವುದು ಈಗಿನಿಂದಲೇ ಪ್ರಶ್ನೆಯಾಗಿ ವೀಕ್ಷಕರನ್ನು ಕಾಡುತ್ತಿದೆ.
ಕಿಚ್ಚ ಸುದೀಪ್ (Kiccha Sudeep) ಕಳೆದ 11 ಸೀಸನ್ ಬಿಗ್ ಬಾಸ್ ಶೋಗಳನ್ನು ಹೋಸ್ಟ್ ಮಾಡಿದ್ದಾರೆ. ಆದರೆ ಬಿಗ್ ಬಾಸ್ ನಿರೂಪಕರು ಆಗೋದಾದ್ರೆ ಕಿಚ್ಚ ಸುದೀಪ್ ಅವರೇ ಆಗಬೇಕು. ಬೇರ್ಯಾರಿಗೂ ಸೂಟ್ ಆಗಲ್ಲ ಅನ್ನೋದು ಹಲವರ ಅಭಿಪ್ರಾಯ. ಹೀಗಾಗಿ ಮುಂದಿನ ಸೀಸನ್ ಅವರು ಬಿಗ್ ಬಾಸ್ ಹೋಸ್ಟ್ ಕಾಣಿಸಿಕೊಳ್ಳುವುದಿಲ್ಲವೆಂದು ಸುದೀಪ್ ಅವರೇ ಹೇಳಿದ್ದಾರೆ.ಮುಂದಿನ ಸೀಸನ್ ನಲ್ಲೂ ಅವರೇ ಹೋಸ್ಟ್ ಆಗಿರಬೇಕೆಂದು ಅನೇಕರ ಅಭಿಪ್ರಾಯ.ಸುದೀಪ್ ಅವರ ಬದಲಿಗೆ ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ್, ರಮೇಶ್ ಅರವಿಂದ್, ಶಿವಣ್ಣ ಹಾಗೂ ರಿಷಬ್ ಶೆಟ್ಟಿ ಅವರು ಬಿಗ್ ಬಾಸ್ ಶೋ ನಡೆಸಿಕೊಡಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಇವರುಗಳ ಬದಲಿಗೆ ಸುದೀಪ್ ಸಾನ್ವಿ (Sanvi Sudeep) ಅವರು ಬಿಗ್ ಬಾಸ್ ನಡೆಸಿಕೊಟ್ಟರೆ ಹೇಗಿರಬಹುದು? ಎಂಬ ಪ್ರಶ್ನೆ ಈಗ ಎದ್ದಿದೆ. ಸಾನ್ವಿ ಸುದೀಪ್ ಅವರು ಇನ್ಸ್ಟಾಗ್ರಾಮ್ನಲ್ಲಿ ʼಆಸ್ಕ್ ಮಿ ಎನಿಥಿಂಗ್ʼ ಮಾಡಿದ್ದಾರೆ. ಈ ವೇಳೆ ಅವರ ಬಳಿ ಫಾಲೋವರ್ಸ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮುಂದಿನ ಬಿಗ್ ಬಾಸ್ ಹೋಸ್ಟ್ ನೀವು ಆಗಬಹುದು ಎಂದು ಒಬ್ಬರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಾನ್ವಿ ಅವರು “ನನಗೆ ಅಷ್ಟು ತಾಳ್ಮೆ ಇಲ್ಲ ಬಾಸ್ ಸಾರಿ” ಎಂದು ನಗುವ ಇಮೋಜಿಯನ್ನು ಹಾಕಿದ್ದಾರೆ.
ಸಾನ್ವಿ ಅವರು ಸಂಗೀತ ಲೋಕದಲ್ಲಿ ತೊಡಗಿಕೊಂಡಿದ್ದಾರೆ. ಸಿಂಗಿಂಗ್ ನಲ್ಲಿ ಅವರಿಗೆ ಅಪಾರ ಒಲವು. ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಸಾನ್ವಿ ಹಾಡಿದ ಹಾಡನ್ನು ಪ್ಲೇ ಮಾಡಲಾಗಿತ್ತು. ಇದನ್ನು ಕೇಳಿ ಕಿಚ್ಚ ಭಾವುಕರಾಗಿದ್ದರು. ʼಸರಿಗಮಪʼದಲ್ಲೂ ಸಾನ್ವಿ ಸುದೀಪ್ ಮುಂದೆ ಹಾಡಿದ್ದರು.