Latest

ಚಿಕ್ಕಮಗಳೂರು: ರಕ್ಷಣೆಗೆ ನಿಲ್ಲಬೇಕಾದ ಅಣ್ಣನಿಂದಲೇ ತಂಗಿ ಗರ್ಭಿಣಿ!!7 ತಿಂಗಳ ಬಸುರಿಯೆಂದು ಖಚಿತಪಡಿಸಿದ ವೈದ್ಯರು!!

1.2k
Spread the love

ನ್ಯೂಸ್‌ ನಾಟೌಟ್: ಅಣ್ಣ ತಂಗಿ ಸಂಬಂಧಕ್ಕೆ ಬೆಲೆ ಕಟ್ಟಲಾಗೋದಿಲ್ಲ.. ಒಮ್ಮೊಮ್ಮೆ ಗಲಾಟೆಗಳು ನಡೆದರೂ ಮತ್ತೆ ಒಂದಾಗಿ ತಂಗಿಯ ರಕ್ಷಣೆಗೆ ಅಣ್ಣ ನಿಲ್ತಾನೆ. ತಂಗಿಗೂ ಅಷ್ಟೇ ನಂಗೆನೇ ಆದರೂ ಅಣ್ಣ ಇದ್ದಾನೆ ಅನ್ನೋ ಧೈರ್ಯ. ಆದರೆ ಇದೇನಿದು

ಬೇಲಿಯೇ ಎದ್ದು ಹೊಲ ಮೇಯುವ ಪ್ರಸಂಗ.. ತಂಗಿಯ ರಕ್ಷಣೆಗಾಗಿ ಇರಬೇಕಾದ ಅಣ್ಣನೇ ಆಕೆಯನ್ನು ಬಲವಂತ ಮಾಡಿದ್ದಲ್ಲದೇ ಗರ್ಭಿಣಿಯೂ ಆದ ನೀಚ ಘಟನೆ ಬಗ್ಗೆ ವರದಿಯಾಗಿದೆ. ಕಾಫಿನಾಡಿನ ಚಿಕ್ಕಮಗಳೂರಿನಲ್ಲಿ ನಾಗರೀಕ ಸಮಾಜ ತಲೆತಗ್ಗಿಸುವ ಘಟನೆ ಇದು. ಇದೀಗ ಆತನ ತಂಗಿ 7 ತಿಂಗಳ ಗರ್ಭಿಣಿ!!

ಕಳೆದ ವರ್ಷವಷ್ಟೇ ಹೈಸ್ಕೂಲು ಮುಗಿಸಿ ಪಿಯುಸಿ ಕಾಲೇಜಿನ ಮೆಟ್ಟಿಲೇರಿದ್ದ ಚಿಕ್ಕಪ್ಪನ ಮಗಳನ್ನು ಕಾಲೇಜಿಗೆ ಬಿಡುವುದು ಹಾಗೂ ಕರೆದುಕೊಂಡು ಬರುವುದು ಮಾಡುತ್ತಿದ್ದ. ತಂಗಿ ತಾನೇ , ಇರಲಿ ಆಕೆಗೂ ಅಣ್ಣ ಇದ್ದರೆ ಧೈರ್ಯ ಅಂತ ಮನೆಯವರಿಗೂ ಆ ಬಗ್ಗೆ ಯೋಚಿಸಿಯೇ ಇರಲಿಲ್ಲ. ಆದರೆ, ಆ ಪಾಪಿ ಅಣ್ಣ ಅದ್ಯಾವಾಗ ತಂಗಿಯ ಮೇಲೆ ಕಣ್ಣು ಹಾಕಿದ್ದಾನೋ ಗೊತ್ತಿಲ್ಲ. ಇದೀಗ ಸ್ವಂತ ಚಿಕ್ಕಪ್ಪನ ಮಗಳನ್ನೇ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ. ಈ ವಿಚಾರವನ್ನು ಮನೆಯಲ್ಲಿ ಯಾರಿಗೂ ಹೇಳದಂತೆ ಗುಟ್ಟಾಗಿ ಕಾಪಾಡುವಂತೆ ಬೆದರಿಕೆಯನ್ನೂ ಹಾಕಿದ್ದಾನಂತೆ.

ಕಾಲೇಜಿಗೆ ಹೋಗುತ್ತಿದ್ದ ಮಗಳಿಗೆ ಸುಸ್ತಾಗುವುದು ಹಾಗೂ ಹೊಟ್ಟೆ ಮುಂದಕ್ಕೆ ಬಂದಿರುವುದನ್ನು ಮನೆಯವರು ಗಮನಿಸಿದ್ದಾರೆ. ಆಗ ಪರೀಕ್ಷೆ ಮಾಡಿದಾಗ ಆಕೆ ಗರ್ಭಿಣಿ ಎಂಬ ಮಾಹಿತಿ ತಿಳಿದುಬಂದಿದೆ. ಆಗ ಅಪ್ರಾಪ್ತ ವಯಸ್ಸಿನ ಮಗಳನ್ನು ಗರ್ಭಿಣಿ ಮಾಡಿದ ಪಾಪಿ ಯಾರೆಂದು ಮಗಳಿಂದ ಬಾಯಿ ಬಿಡಿಸಿದ್ದಾರೆ. ಬೇರೆ ಯಾರೋ ಅಲ್ಲ, ಮನೆಯಲ್ಲಿಯೇ ಇರುವ ದೊಡ್ಡಪ್ಪನ ಮಗ ಶಶಾಂಕ್ (20) ತಂಗಿಯ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.ಈ ಘಟನೆಯ ಬೆನ್ನಲ್ಲಿಯೇ ಸಂತ್ರಸ್ತ ಬಾಲಕಿಯ ಪೋಷಕರು ಶಶಾಂಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಫಿನಾಡ ಮಲೆನಾಡು ತಾಲೂಕಿನ ಹಳ್ಳಿಯೊಂದರಲ್ಲಿ ಘಟನೆ ನಡೆದಿದ್ದನ್ನು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಆರೋಪಿ ಶಶಾಂಕ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಶಶಾಂಕ್ ವಿರುದ್ಧ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆರೋಪಿ ಶಶಾಂಕ್ ನ್ಯಾಯಾಂಗ ಬಂಧನದಲ್ಲಿದ್ದಾನೆ.

 

 

View this post on Instagram

 

A post shared by News not out (@newsnotout)

See also  ಬಿಳಿ ಜಾಂಡೀಸ್ ನಿಂದ ಬಳಲಿ ಪ್ರಾಣ ಕಳೆದುಕೊಂಡ ೧೪ರ ಬಾಲಕಿ; ಏನಿದು ಬಿಳಿ ಜಾಂಡೀಸ್? ಇದರ ಲಕ್ಷಣಗಳೇನು?
  Ad Widget   Ad Widget   Ad Widget   Ad Widget