Latest

ಪುತ್ತೂರು: ನಾದಿನಿ, ಅತ್ತೆ ಸೇರಿದಂತೆ ಇಬ್ಬರು ಮಕ್ಕಳ ಹಂತಕನಿಗೆ ಶಿಕ್ಷೆ ಪ್ರಕಟ;ಆತನ ಆಯುಷ್ಯದ ಕೊನೆಯ ತನಕವೂ ಜೈಲಲ್ಲಿಯೇ ಇರುವಂತೆ ಸುಪ್ರೀಂ ಆದೇಶ

618
Spread the love

ನ್ಯೂಸ್‌ ನಾಟೌಟ್: ನಾದಿನಿ, ಅತ್ತೆ ಸೇರಿದಂತೆ ಇಬ್ಬರು ಮಕ್ಕಳ ಹಂತಕನಿಗೆ ಸುಪ್ರೀಂ ಕೋರ್ಟ್‌ ಕೊನೆಯುಸಿರಿನ ತನಕ ಜೈಲಲ್ಲೇ ಇರುವಂತೆ ಆದೇಶಿಸಿದೆ. ಪಾಣಾಜೆಯ ರಮೇಶ್‌ ನಾಯ್ಕ ಎಂಬಾತ ಈ ಕೃತ್ಯವೆಸಗಿದ್ದ. ಈತ ನಾದಿನಿ ಹಾಗೂ ಅತ್ತೆಯನ್ನು ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದು ಎರಡು ದಿನಗಳ ಬಳಿಕ ತನ್ನ ಪುಟ್ಟ ಮಕ್ಕಳಿಬ್ಬರನ್ನು ಪಾಣಾಜೆ ಬಳಿ ಕೆರೆಗೆ ದೂಡಿ ಹಾಕಿ ಕೊಲೆ ಮಾಡಿದ್ದ. ಹೀಗಾಗಿ ಈತನಿಗೆ ನೀಡಿರುವ ಶಿಕ್ಷೆಯನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌ ಮರಣದಂಡನೆ ಶಿಕ್ಷೆಯನ್ನು ಮಾರ್ಪಡಿಸಿ ಆತನ ಆಯುಷ್ಯದ ಕೊನೆಯ ತನಕವೂ ಜೈಲಲ್ಲಿಯೇ ಇರುವಂತೆ ಆದೇಶಿಸಿದೆ.

ಏನಿದು ಪ್ರಕರಣ:

ಪಾಣಾಜೆ ಅರ್ಧಮೂಲೆಯ ಕೃಷ್ಣ ನಾಯ್ಕರ ಮಗ ರಮೇಶ್‌ ನಾಯ್ಕ (40) ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಮ್ಯಾನೇಜರ್‌ ಆಗಿದ್ದ. ತನ್ನ ಮಕ್ಕಳಾದ ಭುವನರಾಜ್ (10) ಮತ್ತು ಮೂರು ವರ್ಷದ ಮತ್ತೊಂದು ಮಗುವನ್ನು ಪಾಣಾಜೆ ಬಳಿ ಕೆರೆಗೆ ದೂಡಿ ಹಾಕಿ ಕೊಲೆ ಮಾಡಿದ್ದ.ಈ ಘಟನೆಯ ಎರಡು ದಿನದ ಮೊದಲು ತನ್ನ ಅತ್ತೆ ಮುಂಡೂರು ಗ್ರಾಮದ ಪಂಜಳ ಸಮೀಪದ ಉದಯಗಿರಿಯವರಾಗಿದ್ದ ಸರಸ್ವತಿ (60) ಹಾಗೂ ನಾದಿನಿ ಸವಿತಾ (28) ಅವರನ್ನು ತುಮಕೂರಿನಲ್ಲಿ ಕೊಲೆ ಮಾಡಿದ್ದ.

ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದ ತುಮಕೂರು ಮತ್ತು ಪುತ್ತೂರು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಶನ್ ಪರವಾದ ಆಲಿಸಿದ ತುಮಕೂರು ಜಿಲ್ಲಾ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ, ಪುತ್ತೂರು ನ್ಯಾಯಾಲಯ ಮರಣ ದಂಡನೆ ವಿಧಿಸಿ ತೀರ್ಪು ನೀಡಿತ್ತು.ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಕರ್ನಾಟಕ ಹೈಕೋರ್ಟ್‌ ಇದನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ರಮೇಶ್‌ ನಾಯ್ಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಮರಣ ದಂಡನೆಯಿಂದ ಪಾರು ಮಾಡುವಂತೆ ಕೋರಿದ್ದ.

 

 

View this post on Instagram

 

A post shared by News not out (@newsnotout)

See also  ಅಳು, ಚೀರಾಟದ ನಡುವೆಯೇ14 ವರ್ಷದ ಬಾಲಕಿಗೆ ಬಲವಂತದ ವಿವಾಹ..! ಆಕೆಯನ್ನು ಎತ್ತಿಕೊಂಡು ಹೋದ ಪತಿ..!
  Ad Widget   Ad Widget   Ad Widget   Ad Widget