ನ್ಯೂಸ್ ನಾಟೌಟ್: ಸಂಪಾಜೆ ಸಮೀಪದ ಕೊಡಗು ಜಿಲ್ಲೆ ವ್ಯಾಪ್ತಿಯ ಊರುಬೈಲು ಎಂಬಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಎಕ್ಕಡ್ಕ ರೇಖಾನಾಥ್ ಅವರ ಮನೆಯ ರಬ್ಬರ್ ಗೂಡಿಗೆ ಬೆಂಕಿ ತಗುಲಿದ್ದು ಅಪಾರ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಬೆಂಕಿಯ ಕಿಡಿಯಿಂದ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ದುರಂತದ ವಿಚಾರ ತಿಳಿದು ತಕ್ಷಣ ಸುಳ್ಯ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.