Latestಕ್ರೈಂರಾಜ್ಯ

ಮೂವರು ಪುಟ್ಟ ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ..! ಪತಿಯನ್ನು ಬಂಧಿಸಿದ ಪೊಲೀಸರು..!

475
Spread the love

ನ್ಯೂಸ್ ನಾಟೌಟ್: ಮದ್ಯವ್ಯಸನಿಯಾದ ಪತಿಯ ಕಿರುಕುಳ ತಾಳಲಾರದೇ ಮೂವರು ಮಕ್ಕಳೊಂದಿಗೆ ತಾಯಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ರಾಯಬಾಗ ತಾಲ್ಲೂಕಿನಲ್ಲಿ ಚಿಂಚಲಿಯಲ್ಲಿ ಬುಧವಾರ(ಮಾ.5) ನಡೆದಿದೆ.

ಚಿಂಚಲಿ ಪಟ್ಟಣದ ನಿವಾಸಿಗಳಾದ ಶಾರದಾ ಅಶೋಕ ಡಾಲೆ(32), ಅಮೃತಾ(14), ಆದರ್ಶ(8) ಮತ್ತು ಅನುಷಾ (5) ಮೃತರು ಎಂದು ಗುರುತಿಸಲಾಗಿದೆ.
ಎಲ್ಲರ ದೇಹಗಳನ್ನು ನೀರಿನಿಂದ‌ ಹೊರ ತೆಗೆಯಲಾಗಿದೆ.

ಶಾರದಾ ಅವರ ಪತಿ ಅಶೋಕ ಡಾಲೆ ನಿತ್ಯವೂ ಕುಡಿದು ಬಂದು ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಸಮೀಪದ‌ ಕೃಷ್ಣ ನದಿಗೆ ಹಾರಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಒಂದು ಮಗುವನ್ನು ರಕ್ಷಿಸಿ ರಾಯಬಾಗ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅನುಷಾ ಮೃತಪಟ್ಟಳು ಎನ್ನಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪತಿ ಅಶೋಕ ಡಾಲೆ ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿಅನುಮತಿ ಇಲ್ಲದೇ ಚಿತ್ರದ ಶೂಟಿಂಗ್ ಆರೋಪ;ಖ್ಯಾತ ನಿರ್ದೇಶಕ ತರುಣ್ ಸುಧೀರ್ ಸಿನಿಮಾ ಮೇಲೆ ಅರಣ್ಯಾಧಿಕಾರಿಗಳ ದಾಳಿ

See also  ಪುಟ್ಟ ಮಕ್ಕಳೊಂದಿಗೆ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ ದಂಪತಿ..! ಪ್ರೀತಿಸಿ ಮದುವೆಯಾದ ದಂಪತಿ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲೇನಿದೆ..?
  Ad Widget   Ad Widget   Ad Widget   Ad Widget