Latest

ಅನುಮತಿ ಇಲ್ಲದೇ ಚಿತ್ರದ ಶೂಟಿಂಗ್ ಆರೋಪ;ಖ್ಯಾತ ನಿರ್ದೇಶಕ ತರುಣ್ ಸುಧೀರ್ ಸಿನಿಮಾ ಮೇಲೆ ಅರಣ್ಯಾಧಿಕಾರಿಗಳ ದಾಳಿ

253
Spread the love

ನ್ಯೂಸ್‌ ನಾಟೌಟ್: ಖ್ಯಾತ ಡೈರೆಕ್ಟರ್‌ ತರುಣ್ ಸುಧೀರ್‌ ಅವರು ತುಮಕೂರಿನ ನಾಮದ ಚಿಲುಮೆಯಲ್ಲಿ ಅನುಮತಿ ಇಲ್ಲದೇ ಅರಣ್ಯ ಭೂಮಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆಸಿದ್ದು,  ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಹಾಯಕ ಸಂರಕ್ಷಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, ಸ್ಥಳದಲ್ಲಿದ್ದ ಶೂಟಿಂಗ್ ಲೈಟ್ ಸೇರಿದಂತೆ ಕೆಲ ಸಾಮಾಗ್ರಿಗಳನ್ನು ಸೀಜ್ ಮಾಡಲಾಗಿದೆ ಎಮದು ತಿಳಿದು ಬಂದಿದೆ.

ತರುಣ್ ಸುಧೀರ್ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಅರಣ್ಯ ಭೂಮಿಯಲ್ಲಿ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ತುಮಕೂರಿನ ಸಹಾಯಕ ಸಂರಕ್ಷಣಾಧಿಕಾರಿಗಳ ತಂಡ ದಾಳಿ ನಡೆಸಿದೆ. ಕಳೆದ 5 ದಿನಗಳಿಂದ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಸ್ಥಳದಲ್ಲಿದ್ದ ಶೂಟಿಂಗ್ ಲೈಟ್, ಅಡುಗೆ ಸಾಮಾಗ್ರಿಗಳು, ಚೇರ್ ಗಳು ಸೇರಿದಂತೆ ಟಿಟಿ ವಾಹನವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.ಅಂದಹಾಗೆ, ಈ ಚಿತ್ರವು ರಕ್ಷಿತಾ ಪ್ರೇಮ್ ಸಹೋದರ ರಾಣಾ ನಟನೆಯ ಹೊಸ ಸಿನಿಮಾ ಆಗಿದ್ದು, ತರುಣ್ ಸುಧೀರ್ ನಿರ್ಮಾಣ ಮಾಡುತ್ತಿದ್ದಾರೆ.

See also  ಮಾಲೀಕನನ್ನು ರಕ್ಷಿಸಲು ಹುಲಿಯ ಜತೆ ಹೋರಾಡಿದ್ದ ನಾಯಿ ಚಿಕಿತ್ಸೆ ಫಲಿಸದೆ ಸಾವು..! ಇಲ್ಲಿದೆ ಮನಕಲಕುವ ಘಟನೆ..!
  Ad Widget   Ad Widget   Ad Widget   Ad Widget