ನ್ಯೂಸ್ ನಾಟೌಟ್: ಜಾದುವಿನಲ್ಲಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದವರು ಜಾದೂಗಾರ ಕುದ್ರೋಳಿ ಗಣೇಶ್, ತಮ್ಮ ವಿಶಿಷ್ಟ ಜಾದೂ ಕಲೆಯಿಂದಲೇ ಮನೆ ಮಾತಾಗಿರುವ ಇವರು ಇದೀಗ ರಶ್ಮಿಕಾ ಮಂದಣ್ಣ ತಲೆಯನ್ನು ಬೋಳಿಸಿದಂತೆ ಜಾದು ಮಾಡಿದ್ದಾರೆ. ಮ್ಯಾಜಿಕ್ ಶೋ ಒಂದರಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದ ಫೋಟೋದಲ್ಲಿನ ಕೂದಲನ್ನೇ ಮಾಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಮ್ಯಾಜಿಕ್ ಶೋನಲ್ಲಿ ನಡೆದ ಈ ಕಾಮಿಡಿಯನ್ನು ನೋಡಿ ಹಲವರು ಖುಷಿಪಟ್ಟಿದ್ದಾರೆ.
View this post on Instagram
udupimerijaanofficial__ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್ ತಮ್ಮ ಇಬ್ಬರು ಅಸಿಸ್ಟೆಂಟ್‌ಗಳೊಂದಿಗೆ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದ ಚಿತ್ರವನ್ನು ಹಿಡಿದಿರುವ ದೃಶ್ಯವನ್ನು ಕಾಣಬಹುದು. ತಕ್ಷಣ ಅವರು ಮ್ಯಾಜಿಕ್ ಟ್ರಿಕ್ ಮೂಲಕ ರಶ್ಮಿಕಾ ಮಂದಣ್ಣ ಕೂದಲು ಮಾಯಾ ಮಾಡಿದ್ದಾರೆ.