Latestಕ್ರೈಂಬೆಂಗಳೂರುವೈರಲ್ ನ್ಯೂಸ್

ಬೆಂಗಳೂರಲ್ಲಿ ಕುಡಿಯುವ ನೀರನ್ನು ಅನ್ಯ ಕೆಲಸಗಳಿಗೆ ಬಳಸಿದ್ದಕ್ಕೆ 20.85 ಲಕ್ಷ ರೂ. ದಂಡ..! 417 ಜನರಿಗೆ ನೋಟಿಸ್..!

319
Spread the love

ನ್ಯೂಸ್ ನಾಟೌಟ್: ಸಿಲಿಕಾನ್ ಸಿಟಿ ಮಂದಿಗೆ ಜಲಮಂಡಳಿ ಬಿಸಿ ಮುಟ್ಟಿಸಿದೆ. ಕುಡಿಯುವ ನೀರನ್ನು ಅನ್ಯಬಳಕೆ ಮಾಡಿ ನಿಯಮ ಉಲ್ಲಂಘಿಸಿದವರಿಗೆ ಭಾರೀ ಪ್ರಮಾಣದ ದಂಡ ವಿಧಿಸಿದೆ.
ಕುಡಿಯುವ ನೀರನ್ನ ಅನ್ಯ ಕೆಲಸಗಳಿಗೆ ಬಳಸಬಾರದು. ಹಾಗೆ ಮಾಡಿದರೆ ದಂಡ ಹಾಕುತ್ತೇವೆ ಎಂದು ಜಲಮಂಡಳಿ ಆದೇಶ ಮಾಡಿತ್ತು. ಆದೇಶವನ್ನೂ ಲೆಕ್ಕಿಸದೇ ಕುಡಿಯುವ ನೀರನ್ನ ಅನ್ಯ ಕಾರ್ಯಗಳಿಗೆ ಬಳಿಸಿದವರಿಗೆ ದಂಡ ಹಾಕಲಾಗಿದೆ.

ಬೆಂಗಳೂರಿನ 417 ಜನರಿಗೆ ನೋಟಿಸ್ ನೀಡಿ ಜಲಮಂಡಳಿ ದಂಡ ಹಾಕಿದೆ. 417 ಜನರಿಗೆ 20.85 ಲಕ್ಷ ದಂಡ ಹಾಕಲಾಗಿದೆ.

ಬೆಂಗಳೂರು ಪೂರ್ವ ವಲಯ – 105 ಕೇಸ್ ದಂಡ – 4.25 ಲಕ್ಷ ರೂ., ಬೆಂಗಳೂರು ಪಶ್ಚಿಮ ವಲಯ – 111 ಕೇಸ್ ದಂಡ – 5.55 ಲಕ್ಷ ರೂ., ಬೆಂಗಳೂರು ಉತ್ತರ ವಲಯ – 84 ಕೇಸ್ ದಂಡ – 3.20 ಲಕ್ಷ ರೂ., ಬೆಂಗಳೂರು ದಕ್ಷಿಣ ವಲಯ – 115 ಕೇಸ್ ದಂಡ – 5.70 ಲಕ್ಷ ರೂ. ದಂಡ ಹಾಕಲಾಗಿದ್ದು, ಬೆಂಗಳೂರು ಪೂರ್ವ ಭಾಗದ ಜನರು ಹೆಚ್ಚು ನಿಯಮ ಉಲ್ಲಂಘನೆ ಮಾಡಿದ್ದಾರೆ.

ಇದನ್ನೂ ಓದಿಮಾಜಿ ಸಿಎಂ ಯಡಿಯೂರಪ್ಪ ಲಿಂಗಾಯತರೇ ಅಲ್ಲ ಅವರು ಬಳೆಗಾರ ಶೆಟ್ಟರು ಎಂದ ಶಾಸಕ..! ನಾಯಿಗಳಿಗೆ ನಿಯತ್ತಿದೆ ಹಂದಿಗಳಿಗಿಲ್ಲ ಎಂದ ಬಿಜೆಪಿ ಶಾಸಕ..!

See also  ಸುಳ್ಯ: ಪೈಚಾರು ಸಮೀಪ ದ್ವಿಚಕ್ರ ವಾಹನ-ಕಾರು ನಡುವೆ ಅಪಘಾತ, ಸವಾರನಿಗೆ ಗಾಯ
  Ad Widget   Ad Widget   Ad Widget   Ad Widget