Latest

ವಿಟ್ಲ : ಭಾರೀ ಸ್ಫೋಟ,ಮನೆ ಗೋಡೆಯಲ್ಲಿ ಬಿರುಕು , ಬೆಚ್ಚಿ ಬಿದ್ದ ಜನತೆ;ಘಟನೆಗೆ ಕಾರಣವೇನು? ಇಲ್ಲಿದೆ ಡಿಟೇಲ್ಸ್…

963
Spread the love

ವಿಟ್ಲ : ಭಾರೀ ಸ್ಫೋಟ, ಬೆಚ್ಚಿ ಬಿದ್ದ ಜನತೆ;ಘಟನೆಗೆ ಕಾರಣವೇನು? ಇಲ್ಲಿದೆ ಡಿಟೇಲ್ಸ್…

ನ್ಯೂಸ್‌ ನಾಟೌಟ್: ವಿಟ್ಲದ ಸುತ್ತ ಮುತ್ತ ಭಾರೀ ಸ್ಫೋಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ವಿಟ್ಲ ಸುತ್ತಮುತ್ತಲಿನ 3-4 ಕಿ.ಮೀ. ವ್ಯಾಪ್ತಿಯಲ್ಲಿರುವ ಜನತೆ ಬೆಚ್ಚಿ ಬಿದ್ದ ಘಟನೆ ಬಗ್ಗೆ ವರದಿಯಾಗಿದೆ. ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕದಲ್ಲಿ ನಡೆದಿರುವ ಈ ಘಟನೆ ಕೆಲ ಕಾಲ ಆತಂಕದ ವಾತಾವರಣವನ್ನೇ ನಿರ್ಮಾಣ ಮಾಡಿತು. ಹಲವು ಮಂದಿ ಭೂಕಂಪನ ಸಂಭವಿಸಿರಬಹುದೆಂದು ಊಹಿಸಿದ್ದರು.

ವಿಟ್ಲ ಪೇಟೆ, ವಿಟ್ಲಕಸಬಾ ಗ್ರಾಮ, ವಿಟ್ಲಮುಡ್ನೂರು ಗ್ರಾಮ, ಕಂಬಳಬೆಟ್ಟು, ಮೇಗಿನಪೇಟೆ, ಚಂದಳಿಕೆ ಹಾಗೂ ಸುತ್ತಮುತ್ತಲಿನಲ್ಲಿ ಭಾರೀ ಪ್ರಮಾಣದ ಸದ್ದು ಸಂಭವಿಸಿ, ಆತಂಕದ ಸ್ಥಿತಿ ನಿರ್ಮಾಣವಾಯಿತು.ಆದರೆ ಘಟನೆಗೆ ಕಾರಣ ಭೂಕಂಪ ಅಲ್ಲ ಬದಲಾಗಿ   ಮಾಡತ್ತಡ್ಕದಲ್ಲಿರುವ ಕಲ್ಲಿನ ಕೋರೆಯಲ್ಲಿ ಕಲ್ಲು ಸ್ಫೋಟಿಸುವ ಸ್ಫೋಟಕ ಒಮ್ಮೆಲೇ ಸ್ಫೋಟಗೊಂಡಿದೆ ಎನ್ನಲಾಗಿದೆ.ಘಟನೆಯ ಪರಿಣಾಮ ಯಾವುದೇ ಪ್ರಾಣ ಹಾನಿ ಹಾಗೂ ಇನ್ನಿತರ ಅನಾಹುತಗಳು ನಡೆದಿಲ್ಲ. ಹತ್ತಿರದ ಹಲವು ಮನೆಗಳ ಗೋಡೆ ಬಿರುಕು ಬಿಟ್ಟಿದೆ. ಮಾಡಿನ ಹಂಚು, ಶೀಟುಗಳು ಪುಡಿಪುಡಿಯಾಗಿ ಬಿದ್ದಿದೆ. ವಿಟ್ಲ ಪೇಟೆಯಲ್ಲಿ ಹಲವು ಮನೆಗಳ ಗ್ಲಾಸ್ ಅಲುಗಾಡಿದ್ದು, ಭಯಭೀತ ವಾತಾವರಣ ಸೃಷ್ಟಿಯಾಗಿತ್ತು ಎಂದು ತಿಳಿದು ಬಂದಿದೆ.

See also  ಕಟ್ಟಡದಲ್ಲಿ ಅಗ್ನಿ ಅವಘಡ, ಪ್ರಾಣ ಉಳಿಸಿಕೊಳ್ಳಲು 2ನೇ ಮಹಡಿಯಿಂದ ಜಿಗಿದ ಜನ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget   Ad Widget