Latestಕ್ರೈಂರಾಜ್ಯವೈರಲ್ ನ್ಯೂಸ್

ರೈಲಿಗೆ ಸಿಲುಕುತ್ತಿದ್ದ ವಿಕಲಚೇತನ ವ್ಯಕ್ತಿಯನ್ನು ರಕ್ಷಿಸಿದ ಆರ್‌.ಪಿ.ಎಫ್‌ ಪೇದೆ..! ಕೃತಕ ಕಾಲಿನ ಅಳವಡಿಕೆಗೆ ಬಂದಿದ್ದ ವ್ಯಕ್ತಿ..!

138
Pc Cr: Udayavani
Spread the love

ನ್ಯೂಸ್ ನಾಟೌಟ್: ರೈಲಿನಿಂದ ಇಳಿಯಲು ಪ್ರಯತ್ನಿಸಿದ ವೇಳೆ ಸಿಲುಕುತ್ತಿದ್ದ ವಿಕಲ ಚೇತನರೊಬ್ಬರನ್ನು ಆರ್‌ ಪಿಎಫ್ ಮುಖ್ಯ ಪೇದೆ ರಕ್ಷಿಸಿದ ಘಟನೆ ಭಾನುವಾರ (ಮಾ.02) ತಡರಾತ್ರಿ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆ ಹಿಟ್ಟಿನಹಳ್ಳಿ ಗ್ರಾಮದ ಎಚ್.ಎನ್.ಪ್ರಶಾಂತ್ (25) ಪ್ರಾಣಾಪಾಯದಿಂದ ಪಾರಾದವರು ಎಂದು ಗುರುತಿಸಲಾಗಿದೆ.
ಪ್ರಶಾಂತ್, ಬೆಂಗಳೂರಿನ ಆಸ್ಪತ್ರೆಗೆ ಹೋಗಿ ಕೃತಕ ಬಲಗಾಲಿನ ಅಳವಡಿಕೆಗೆ ಮಾಪನ ಮಾಡಿಸಿಕೊಳ್ಳಲು ಹೊಸಪೇಟೆಯಿಂದ ಯಶವಂತಪುರಕ್ಕೆ ಹೋಗುವ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಕಾರಣಾಂತರದಿಂದ ವೈದ್ಯರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಗೆ ವಾಪಸ್ ಹೋಗಲು ನಿರ್ಧರಿಸಿ ಪುನಃ ಯಶವಂತಪುರದಿಂದ ವಿಜಯಪುರಕ್ಕೆ ಹೋಗುವ ವಿಶೇಷ ರೈಲಿನಲ್ಲಿ ಹೋಗಿ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ರಾತ್ರಿ 11.32 ರ ವೇಳೆಯಲ್ಲಿ ಚಲಿಸುತ್ತಿರುವ ರೈಲಿನಿಂದ ಇಳಿಯಲು ಯತ್ನಿಸಿದ್ದಾರೆ.

ಸ್ಥಳದಲ್ಲೇ ಇದ್ದ ಆರ್‌ಪಿಎಫ್ ಮುಖ್ಯ ಪೇದೆ ಬಿ.ಎಸ್.ಸತೀಶ್ ಎಂಬವರು, ಈ ವಿಕಲಚೇತನ ವ್ಯಕ್ತಿ ಚಲಿಸುತ್ತಿರುವ ರೈಲಿನಿಂದ ಕೆಳಗೆ ಬೀಳುತ್ತಿರುವುದನ್ನು ಗಮನಿಸಿ ಪ್ರಾಣದ ಹಂಗು ತೊರೆದು 2ನೇ ಪ್ಲಾಟ್‌ಫಾರ್ಮ್ ಬದಿಗೆ ಎಳೆದುಕೊಂಡು ವಿಕಲಾಂಗ ಪ್ರಯಾಣಿಕನ ಜೀವ ಉಳಿಸಿದ್ದಾರೆ.

ಅಘಾತಕ್ಕೊಳಗಾಗಿದ್ದ ಅಂಗವಿಕಲ ಪ್ರಶಾಂತ್ ಅವರನ್ನು ಸಂತೈಸಿ, ಅವರಿಗೆ ಆತ್ಮಸ್ಥೈರ್ಯ ತುಂಬಿ ಸಮಾಧಾನ ಮಾಡಿದ್ದಾರೆ. ಬಳಿಕ ಗ್ರಾಮಕ್ಕೆ ವಾಪಸಾಗಲು ನೆರವಾಗಿದ್ದಾರೆ. ಸಮಯ ಪ್ರಜ್ಞೆಯಿಂದ ವಿಕಲಾಂಗನ ಪ್ರಾಣ ಕಾಪಾಡಿದ ಆರ್ ಪಿಎಫ್ ಮುಖ್ಯ ಪೇದೆ ಬಿ.ಎಸ್.ಸತೀಶ್ ಅವರನ್ನು ರೈಲ್ವೆ ರಕ್ಷಣಾ ದಳದ ನಿರೀಕ್ಷಕ ಬಿ.ಕೆ.ಪ್ರಕಾಶ್, ಉಪ ನಿರೀಕ್ಷಕ ಎ.ಕೊಂಡರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

See also  ಅನುಮತಿ ಇಲ್ಲದೇ ಚಿತ್ರದ ಶೂಟಿಂಗ್ ಆರೋಪ;ಖ್ಯಾತ ನಿರ್ದೇಶಕ ತರುಣ್ ಸುಧೀರ್ ಸಿನಿಮಾ ಮೇಲೆ ಅರಣ್ಯಾಧಿಕಾರಿಗಳ ದಾಳಿ
  Ad Widget   Ad Widget   Ad Widget   Ad Widget