ನ್ಯೂಸ್ ನಾಟೌಟ್: ಗಂಟಲಲ್ಲಿ ಮೀನು ಸಿಲುಕಿಕೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ಇಂದು(ಮಾ.3) ನಡೆದಿದೆ. ಯುವಕ ಭತ್ತದ ಗದ್ದೆಯಿಂದ ನೀರನ್ನು ಹೊರಹಾಕುವಾಗ ಮೀನು ಹಿಡಿಯುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಅವರ ಸ್ನೇಹಿತರು ಕೂಡ ಅಲ್ಲಿದ್ದರು. ಹುಡುಗಾಟಿಕೆಯಲ್ಲಿ ಒಂದು ಮೀನನ್ನು ಹಿಡಿದು ಬಾಯಿಯಲ್ಲಿ ಹಾಕಿಕೊಂಡು ಇನ್ನೊಂದು ಮೀನನ್ನು ಹಿಡಿಯಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಅಷ್ಟರಲ್ಲಿ, ಅವನು ಬಾಯಿಯಲ್ಲಿ ಹಿಡಿದಿದ್ದ ಮೀನು ಇದ್ದಕ್ಕಿದ್ದಂತೆ ಒಳಹೋಗಿ ಅವನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳದ ಕಾಯಂಕುಲಂನಲ್ಲಿ ಈ ಘಟನೆ ನಡೆದಿದ್ದು, ಮೃತ ಯುವಕನನ್ನು ಪುತ್ತುಪ್ಪಳ್ಳಿ ನಿವಾಸಿ ಆದರ್ಶ್ ಅಲಿಯಾಸ್ ಉನ್ನಿ (25) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ 4.30 ರ ಸುಮಾರಿಗೆ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.