Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

24 ಸಾಕ್ಸ್ ​ಗಳು ಮತ್ತು ಇತರ ವಸ್ತುಗಳನ್ನು ನುಂಗಿದ ಸಾಕು ನಾಯಿ ಅಸ್ವಸ್ಥ..! ನಾಯಿ ಮಾಲಿಕನಿಗೆ ಶಾಕ್..!

230
Spread the love

ನ್ಯೂಸ್ ನಾಟೌಟ್: ಇಲ್ಲೊಂದು ಸಾಕು ನಾಯಿ 24 ಸಾಕ್ಸ್ ​ಗಳನ್ನು ಹಾಗೂ ಇತರೆ ವಸ್ತುಗಳನ್ನು ತಿಂದು ಆಸ್ಪತ್ರೆಗೆ ಸೇರಿದೆ. ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದೆ. ಮನೆಯ ನಾಯಿ ಸಾಕ್ಸ್ ​ಗಳನ್ನು ತಿಂದು ಅನಾರೋಗ್ಯಗೊಂಡಿದೆ. ಟೈ, ಸಾಕ್ಸ್​, ಶೂ ಇನ್ಸರ್ಟ್​ ಸೇರಿ ಹಲವು ವಸ್ತುಗಳನ್ನು ತಿಂದಿತ್ತು ಎನ್ನಲಾಗಿದೆ.

ತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ನಾಯಿಯ ಜೀವ ಉಳಿಸಲಾಗಿದೆ ಎಂದು ಕೊರೊನಾ ಅನಿಮಲ್ ಎಮರ್ಜೆನ್ಸಿ ಸೆಂಟರ್ ತಿಳಿಸಿದೆ. ನಾಯಿ ಇದೆಲ್ಲಾ ತಿಂದ ಬಳಿಕ ವಾಂತಿ ಮಾಡಲು ಶುರು ಮಾಡಿತ್ತು. ಹೊಟ್ಟೆ ಊದಿಕೊಂಡಿತ್ತು, ಏನೋ ಗಂಭೀರ ಸಮಸ್ಯೆ ಇದೆ ಎಂದು ಮನೆಯ ಮಾಲೀಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಬಟ್ಟೆಗಳು ಕರುಳಿನಲ್ಲಿ ಸಿಕ್ಕಿಹಾಕಿಕೊಂಡಿರುವುದು ತಿಳಿದಿದೆ.

ಸಾಕ್ಸ್‌ ಗಳ ಎಕ್ಸ್ ರೇ ಫೋಟೋಗಳು ಕ್ಲಿನಿಕ್ ಪೋಸ್ಟ್ ಮಾಡಿದೆ. ನಾಯಿ ಮಾಲಿಕ ಇದನ್ನು ನೋಡಿ ಅಚ್ಚರಿಪಟ್ಟಿದ್ದಾರೆ.

See also  ಗೋವಾದ ಬದಲು ಅಯೋಧ್ಯೆಗೆ ಕರೆದೊಯ್ದ ಗಂಡ..! ಡೈವೋರ್ಸ್‌ ಕೇಳಿದ ಹೆಂಡತಿ..! ಏನಿದು ಹನಿಮೂನ್ ಕಹಾನಿ..?
  Ad Widget   Ad Widget   Ad Widget