ನ್ಯೂಸ್ ನಾಟೌಟ್: ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗುತ್ತಿಗೆ ಆಧಾರಿತ ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲು ಓಲಾ ಎಲೆಕ್ಟ್ರಿಕ್(Ola Electric) ಮೊಬಿಲಿಟಿ ಲಿಮಿಟೆಡ್ ಸಿದ್ಧತೆ ನಡೆಸಿರುವ ಬಗ್ಗೆ ವರದಿ ತಿಳಿಸಿದೆ.
ಸಂಗ್ರಹಣೆ, ಪೂರೈಕೆ, ಗ್ರಾಹಕ ಸಂಬಂಧಿ ವಿಭಾಗ ಸೇರಿದಂತೆ ಚಾರ್ಜಿಂಗ್ ಮೂಲಭೂತ ಸೌಕರ್ಯ ವಿಭಾಗಗಳ ಉದ್ಯೋಗಿಗಳನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಓಲಾ ಸಂಸ್ಥೆ ಮೂಲಗಳು ತಿಳಿಸಿವೆ ಎನ್ನಲಾಗಿದೆ.
ಓಲಾ ಕಂಪನಿಯ ವೆಚ್ಚವನ್ನು ನಿಯಂತ್ರಿಸಿ, ನಷ್ಟವನ್ನು ಸರಿದೂಗಿಸುವ ಅಂಗವಾಗಿ ಉದ್ಯೋಗ ಕಡಿತಕ್ಕೆ ಮುಂದಾಗಿರುವುದಾಗಿ ತಿಳಿಸಿದೆ. ಉದ್ಯೋಗ ಕಡಿತದ ಸುದ್ದಿ ಹೊರಬೀಳುತ್ತಿದ್ದಂತೆಯೇ ಓಲಾ ಎಲೆಕ್ಟ್ರಿಕ್ ಷೇರುಗಳ ಮೌಲ್ಯ ಶೇ.5ರಷ್ಟು ಕುಸಿತ ಕಂಡಿರುವುದಾಗಿ ವರದಿ ತಿಳಿಸಿದೆ. 2024ರ ನವೆಂಬರ್ ನಲ್ಲಿ ಓಲಾ ಎಲೆಕ್ಟ್ರಿಕ್ ಸುಮಾರು 500 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಐದು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿರುವುದಾಗಿ ವರದಿ ತಿಳಿಸಿದೆ. 2024ರ ಮಾರ್ಚ್ ವೇಳೆ ಓಲಾ ಉದ್ಯೋಗಿಗಳ ಒಟ್ಟು ಸಂಖ್ಯೆ 4,000 ಇದ್ದಿರುವುದಾಗಿ ವರದಿ ತಿಳಿಸಿದೆ.