ನ್ಯೂಸ್ ನಾಟೌಟ್: ಕನ್ನಡದ ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್ (Aishwarya Rangarajan) ಅವರಿಗೆ ನಿಶ್ಚಿತಾರ್ಥದ ಸಂಭ್ರಮ.. ಮಂಗಳೂರು ಹುಡುಗನ ಜೊತೆ ಮಾ.2ರಂದು ಸರಳವಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಮದುವೆಗೆ ಸಜ್ಜಾಗಿರುವ ಗಾಯಕಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.
ಐಶ್ವರ್ಯಾ ರಂಗರಾಜನ್ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಎಂಗೇಜ್ ಆಗಿದ್ದೀವಿ ಎಂದು ಸಿಹಿ ಸುದ್ದಿ ನೀಡಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ತುಂಬಾ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆ ಆಗುತ್ತಿರುವ ಹುಡುಗನನ್ನು ಐಶ್ವರ್ಯಾ ಪರಿಚಯಿಸಿದ್ದಾರೆ. ಗಾಯಕಿ ಹಂಚಿಕೊಂಡ ಪೋಸ್ಟ್‌ಗೆ ‘ಬೆಂಗಳೂರು ಟು ಮಂಗಳೂರು, ಪರ್ಫೆಕ್ಟ್ ಪಿಚ್’ ಎಂದು ಐಶ್ವರ್ಯಾ ಅಡಿಬರಹ ಬರೆದುಕೊಂಡಿದ್ದಾರೆ. ಮಂಗಳೂರಿನ ಹುಡುಗ ಎಂಬ ವಿವರ ಹೇಳಿದರೇ ವಿನಹ ಮತ್ತಿನ್ನೇನು ಹೇಳಿಲ್ಲ.