ನ್ಯೂಸ್ ನಾಟೌಟ್: ಭಕ್ತಿ-ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಶುದ್ಧ ಭಾಷೆ, ಸಾಹಿತ್ಯದ ಬಳಕೆಯ ಪ್ರಬಲ ಮಾಧ್ಯಮ. ಯಕ್ಷಗಾನವನ್ನು ವೀಕ್ಷಿಸಲೆಂದೇ ಸಾವಿರಾರು ಸಂಖ್ಯೆಯಲ್ಲಿ ಜನ ಬಂದು ಸೇರುತ್ತಾರೆ.ಇಂಹ ಯಕ್ಷಗಾನವು ಕಲ್ಲುಗುಂಡಿಯ ಒತ್ತೆಕೋಲ ಗದ್ದೆಯಲ್ಲಿರುವ ರಂಗಮಂಟಪದಲ್ಲಿ ಫೆ.೨೫ರಂದು ನಡೆಯಿತು.
ಊರ ಹಾಗೂ ಪರವೂರು ಸೇರಿದಂತೆ ಸಮಸ್ತರ 35ನೇ ವರ್ಷದ ಸೇವೆಯ ಬಯಲಾಟವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರ ವತಿಯಿಂದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಈ ವೇಳೆ ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಊರ ಹಾಗೂ ಪರವೂರ ಯಕ್ಷಾಭಿಮಾನಿಗಳು ಭಾಗವಹಿಸಿ ಯಕ್ಷಗಾನ ವೀಕ್ಷಿಸಿದರು.