Latestಚಿಕ್ಕಮಗಳೂರು

ಬಿಳಿ ಜಾಂಡೀಸ್ ನಿಂದ ಬಳಲಿ ಪ್ರಾಣ ಕಳೆದುಕೊಂಡ ೧೪ರ ಬಾಲಕಿ; ಏನಿದು ಬಿಳಿ ಜಾಂಡೀಸ್? ಇದರ ಲಕ್ಷಣಗಳೇನು?

1.1k
Spread the love

ನ್ಯೂಸ್‌ ನಾಟೌಟ್: ವಿದ್ಯಾರ್ಥಿನಿಯೋರ್ವಳು ಬಿಳಿ ಜಾಂಡಿಸ್ ಕಾಯಿಲೆಯಿಂದ ಬಳಲಿ ಮೃತಪಟ್ಟ ಘಟನೆ ಫೆ. 26ರ ಬುಧವಾರ ನಡೆದಿದೆ.ಹೆಗ್ಗೋಡಿನ ಐಸಿರಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಈಕೆ ಕೆಲ ದಿನಗಳಿಂದ ಬಿಳಿ ಜಾಂಡಿಸ್ ಕಾಯಿಲಿಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.

ಈಕೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು , ಆದರೆ ಈಕೆಗೆ ಕಿಡ್ನಿ ವೈಫಲ್ಯ ಸಹ ಉಂಟಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಅಕಾಲಿಕ ನಿಧನಕ್ಕೆ ಸಹ್ಯಾದ್ರಿ ಶಾಲಾ ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.

ಏನಿದು ಬಿಳಿ ಜಾಂಡೀಸ್ ?

ಸಾಮಾನ್ಯ ಜಾಂಡೀಸ್ ಗಿಂತ ಬಹುತೇಕ ಭಿನ್ನವಾಗಿರುವ ಈ ಮಾರಕ ಕಾಯಿಲೆ.ಗುರುತಿಸಲು ಕಷ್ಟವಾಗುವಂತಹ ಹಾಗೂ ಚಿಕಿತ್ಸೆ ವಿಳಂಬವಾದಲ್ಲಿ ಪ್ರಾಣಕ್ಕೆ ಮಾರಕವಾಗುವ ಗಂಭೀರ ಕಾಯಿಲೆ.ಇದನ್ನು ಅಲೋಪಥಿ ಗುರುತಿಸುವುದಿಲ್ಲ.ಇದರಲ್ಲಿ ತ್ವಚೆ ಹಾಗೂ ಕಣ್ಣುಗಳು ವಿಪರೀತ ಬಿಳಿಯಾಗುತ್ತವೆ ಎಂದು ಹೇಳಲಾಗಿದೆ. ದೇಹಕ್ಕೆ ಸುಸ್ತು ಮತ್ತು ಜ್ವರದ ಲಕ್ಷಣ ಕಾಣಿಸಿಕೊಳ್ಳುತ್ತವೆ.

See also  ಎರಡು ಮಕ್ಕಳಿರುವ 50ವರ್ಷದ ಅಂಕಲ್ ಜೊತೆ 18ರ ಯುವತಿ ಓಡಿಹೋಗಿ ಮದುವೆ ! ಏನಿದು 18 ವೆಡ್ಸ್ 50 ಪ್ರೇಮಕಥೆ?
  Ad Widget   Ad Widget   Ad Widget