ನ್ಯೂಸ್ ನಾಟೌಟ್: KSRTC ಬಸ್ ಕಂಡಕ್ಟರ್ ಒಬ್ಬರು ವ್ಯಕ್ತಿಯೊಬ್ಬನ ಜೊತೆ ಅಮಾನವೀಯವಾಗಿ ನಡೆದುಕೊಂಡು ಆತನನ್ನು ಒದ್ದು ಬಸ್ ನಿಂದ ಕೆಳಗೆ ಇಳಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಸ್ವತಃ KSRTC ಅಧಿಕಾರಿಗಳು ಇಂದು( ಫೆ.23) ಸ್ಪಷ್ಟನೆ ನೀಡಿದ್ದಾರೆ.
“ಹೌದು ಈ ಘಟನೆ ನಡೆದಿರುವುದು ನಿಜ. ಆದರೆ, ಇದು ಎರಡು ವರ್ಷದ ಹಳೆಯ ವಿಡಿಯೋ” ಎಂದು ಎಕ್ಸ್ ನಲ್ಲಿ ಇಂದು (ಫೆ.23) ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಕೆಳಕಂಡ ವೀಡಿಯೋ ತುಣುಕಿನ ಬಗ್ಗೆ ಸ್ಪಷ್ಟೀಕರಣ: pic.twitter.com/pUWSp544tz
— KSRTC (@KSRTC_Journeys) February 23, 2025
“ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸದರಿ ವಿಡಿಯೊ ತುಣುಕು ಎರಡೂವರೆ ವರ್ಷಗಳ ಹಿಂದಿನದ್ದಾಗಿದೆ. ಈ ಘಟನೆಯು ದಿನಾಂಕ 07-09-2022 ರ ಸಂಜೆ ನಡೆದಿತ್ತು. ಬಸ್ ಸಂಖ್ಯೆ ಎಫ್ 0002 ಅನುಸೂಚಿ ಸಂಖ್ಯೆ 159/160 ರಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ ಸುಖರಾಜ ರೈ ಅವರು ಪುತ್ತೂರು ತಾಲೂಕಿನ ಈಶ್ವರ ಮಂಗಲದಲ್ಲಿ ಓರ್ವ ಮಧ್ಯಪಾನ ಮಾಡಿದ ಪ್ರಯಾಣಿಕರನ್ನು ವಾಹನದಿಂದ ಕೆಳಗಡೆಗೆ ಇಳಿಸುವಾಗ ಅಮಾನವೀಯವಾಗಿ ವರ್ತಿಸಿದ್ದರು. ಅವರಿಗೆ ಹೊಡೆದು ಕಾಲಿನಿಂದ ಒದ್ದು ಬೀಳಿಸಿರುತ್ತಾರೆ. ನಿರ್ವಾಹಕರ ಈ ರೀತಿಯ ವರ್ತನೆಗೆ ಸಂಸ್ಥೆಯು ಕಠಿಣ ಶಿಸ್ತಿನ ಕ್ರಮ ತೆಗೆದುಕೊಂಡು ಅಮಾನತ್ತು ಶಿಕ್ಷೆಯನ್ನು ಸಹ ವಿಧಿಸಿತ್ತು. ನಿಗಮವು ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿ, ಇತರೆ ಸಿಬ್ಬಂದಿಗಳಿಗೆ ಪ್ರಯಾಣಿಕರೊಡನೆ ಸೌಹಾರ್ದತೆಯಿಂದ ವರ್ತಿಸುವಂತೆ ಎಚ್ಚರಿಕೆ ನೀಡಲಾಗಿತ್ತು ಎಂದು ತಿಳಿಸಿದೆ.