ನ್ಯೂಸ್ ನಾಟೌಟ್: ಕಾಫಿನಾಡ ಮಲೆನಾಡು ಭಾಗದಲ್ಲಿ ಆನೆ ಹಾವಳಿ ಬಹಳ ವರ್ಷಗಳಿಂದಾನೆ ಇದೆ.ಹೀಗಾಗಿ ಪ್ರತಿಯೊಬ್ಬರು ಕೂಡ ಬಹಳ ಕೇರ್ ಫುಲ್ ಆಗಿರಬೇಕಾಗುತ್ತದೆ.ಇದೀಗ ಆನೆ ದಾಳಿಯಿಂದಾಗಿ ಸ್ವತಃ ಇ.ಟಿ.ಎಫ್. ( ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿಯೇ ಮರಹತ್ತಿ ಜೀವ ಉಳಿಸಿಕೊಂಡಿರೋ ಘಟನೆ ಬಗ್ಗೆ ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಸಾಲೂರು ಅರಣ್ಯದಲ್ಲಿ ನಡೆದಿದೆ.
ಈ ಭಾಗದಲ್ಲಿ ಮೂರು ತಿಂಗಳಲ್ಲಿ ಇಬ್ಬರು ಆನೆ ದಾಳಿಗೆ ತುತ್ತಾಗಿದ್ದಾರೆ. ಶುಕ್ರವಾರ ಕೂಡ ಕಾಫಿತೋಟಕ್ಕೆ ಬಂದಿದ್ದ ಪುಂಡಾನೆಯೊಂದನ್ನ ಓಡಿಸಲು ಹೋಗಿದ್ದ ಇ.ಟಿ.ಎಫ್. ಸಿಬ್ಬಂದಿಯ ಮೇಲೆಯೇ ಆನೆಯೊಂದು ಅಟ್ಯಾಕ್ ಮಾಡಲು ಮುಂದಾಗಿದ್ದು, ಜಸ್ಟ್ ಮಿಸ್ ಎಂದು ಹೇಳಬಹುದು. ಸಾಲೂರು ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ ಕಾಡಾನೆಯನ್ನು ಓಡಿಸುವ ವೇಳೆ ಆನೆ ಇಟಿಎಫ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ.
ಈ ವೇಳೆ ತಕ್ಷಣ ಎಚ್ಚೆತ್ತ ಇಟಿಎಫ್ ಸಿಬ್ಬಂದಿಗಳು ಮರವನ್ನೇರಿ ಕುಳಿತು ಜೀವ ಉಳಿಸಿಕೊಂಡಿದ್ದಾರೆ. ಏನೋ ಅದೃಷ್ಟ ಚೆನ್ನಾಗಿತ್ತು ಅನ್ಸುತ್ತೆ..ಮರವೇರಿ ಕುಳಿತ ನಂತರವೂ ಕಾಡಾನೆ ಮರವನ್ನು ಅಲುಗಾಡಿಸಲು ಮುಂದಾಗಿದ್ದು, ಈ ಭಯಾನಕ ದೃಶ್ಯ ಮೊಬೈಲ್‌ಗಳಲ್ಲಿ ಸೆರೆಯಾಗಿದೆ. ಮರದ ಮೇಲೆ ಕುಳಿತುಕೊಂಡು ಆನೆ ನಿಗ್ರಹ ದಳದ ಸಿಬ್ಬಂದಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.