ನ್ಯೂಸ್ ನಾಟೌಟ್: ಕುಂಭ ಮೇಳ ಫೆ.೨೬ರವರೆಗೆ ಇದ್ದು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರತಿಯೊಬ್ಬ ಹಿಂದೂ ಭಕ್ತನ ಆಸೆ ಏನೆಂದರೆ ಪ್ರಯಾಗರಾಜ್ ದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿ ಅಲ್ಲಿನ ತ್ರಿವೇಣಿ ಸಂಗಮದಲ್ಲಿ ಮಿಂದು ಪಾವನವಾಗಬೇಕು ಎಂದು.ಅದರಲ್ಲೂ 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಲು ಎಲ್ಲರ ಹಾತೊರೆಯುತ್ತಾರೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ರಿಲಯನ್ಸ್ ನ ಮುಖ್ಯಸ್ಥ ಮುಖೇಶ್ ಅಂಬಾನಿ ಕೂಡ ಕುಂಭಮೇಳದಲ್ಲಿ ಪಾಲ್ಗೊಂಡಿರುದು ಅಚ್ಚರಿಯ ಸಂಗತಿ ಏನಲ್ಲ, ಆದರೆ ಅವರ ಭಾಗವಹಿಸುವೆ ವಿಶೇಷವಾಗಿರುವುದೆಕೆಂದರೆ ಅವರು ಅಲ್ಲಿ ತಮ್ಮ ಅಂಗಡಿಯೊಂದು ಓಪನ್ ಮಾಡಿ ಮೇಳ ಕ್ಕೆ ಬಂದಿರುವ ಭಕ್ತರಿಗೆ ಜಿಯೋ ಸೀಮ್ ಗಳನ್ನು ಮಾರಾಟ ಮಾಡುತ್ತಿದ್ದಾರೆ.
ಎಕ್ಷ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, ಇದನ್ನು ನೋಡಿದ ಬಹುತೇಕರು ಅಯ್ಯೋ..! ಇದೇನಿದು ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಅಂಬಾನಿ ಸಿಮ್ ಮಾರುವ ಕೆಲಸಕ್ಕೆ ಮುಂದಾಗುವುದೇ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಕೃತಕಬುದ್ದಿಮತ್ತೆ ಯನ್ನು ಬಳಸಿ ನಿರ್ಮಿಸಿರುವ ವಿಡಿಯೋ ಇದಾಗಿದ್ದು”ಎಐ ಈಗ ಔಟ್ ಆಫ್ ಕಂಟ್ರೋಲ್ ಆಗಿದೆಪ್ರಸಿದ್ದ ವ್ಯಕ್ತಿಗಳಾದ ಅಂಬಾನಿ,ಅದಾನಿ,ಎಲೋನ್ ಮಾಸ್ಕ್ ಅವರು ಕುಂಭಮೇಳದಲ್ಲಿ ಅಂಗಡಿಯನ್ನು ತೆರೆದಿದ್ದಾರೆ” ಎಂದು ಅವರು ಬರೆದುಕೊಂಡಿದ್ದಾರೆ.ಏನೇ ಆಗಲಿ ಈಗ ಕೃತಕ ಬುದ್ದಿ ಮತ್ತೆ ತಂತ್ರಜ್ಞಾನವು ನೈಜ್ಯತೆಯನ್ನು ನಾಚಿಸುವ ಮಟ್ಟಿಗೆ ಬೆಳೆದಿರುವುದು ನಿಜಕ್ಕೂ ಅಚ್ಚರಿ ಎಂದೇ ಹೇಳಬಹುದು.
AI is Getting Out Of Control 😂😂 Famous Personalities Ambani, Adani, Elon Musk.. at Kumbh Mela at their Shops 😂 pic.twitter.com/AKTzx25MGA
— Rosy (@rose_k01) February 20, 2025