ನ್ಯೂಸ್ ನಾಟೌಟ್: ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡೋದು, ಚಾಟ್ ಮಾಡೋದು, ವಿವಾದಾತ್ಮಕ ಹೇಳಿ ನೀಡೋದರ ಕಾರಣಕ್ಕೆ ಹಲವರು ಕಾನೂನು ಕ್ರಮಗಳನ್ನು ಎದುರಿಸಿದ ಘಟನೆಗಳು ವರದಿಯಾಗುತ್ತಿರುತ್ತವೆ. ಇಲ್ಲೊಬ್ಬ ಫೇಸ್ ಬುಕ್ ನಲ್ಲಿ ಮಾಡಿದ್ದ ಒಂದೇ ಒಂದು ಕಮೆಂಟ್ ಈಗ ಜಾಮೀನು ಪಡೆಯಲು ಬರೋಬ್ಬರಿ 200ಕ್ಕೂ ಹೆಚ್ಚು ಕಿ.ಮೀ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಐಎಎಸ್ ಅಧಿಕಾರಿಯೊಬ್ಬರು ಹಾಕಿದ್ದ ಫೇಸ್ ಬುಕ್ ಪೋಸ್ಟ್ ಗೆ ಆತ ಕಮೆಂಟ್ ಮಾಡಿ ಈ ಅಚಾತುರ್ಯಕ್ಕೆ ಕಾರಣನಾಗಿದ್ದಾನೆ. ಈ ಘಟನೆ ನಡೆದಿದ್ದು 2023ರಲ್ಲಿ ನಲ್ಬರಿ ಪಟ್ಟಣದ ಐಎಎಸ್ ಮಹಿಳಾ ಅಧಿಕಾರಿಯೊಬ್ಬರು ಫೇಸ್‌ಬುಕ್ ನಲ್ಲಿ ಬಹಳ ಆಕ್ಟಿವ್ ಆಗಿದ್ದರು. ನಿತ್ಯ ಒಂದೊಂದು ಫೋಟೋವನ್ನು ಹಾಕುವುದು ಅವರ ಅಭ್ಯಾಸವಾಗಿತ್ತು. ಅದೇ ರೀತಿ ಐಎಎಸ್ ಅಧಿಕಾರಿ ವರ್ಣಾಲಿ ದೇಕಾ ಹಾಕಿದ್ದ ಎಲ್ಲಾ ಪೋಸ್ಟ್ ಗಳಿಗೂ ಇಬ್ಬರು ಯಾವಾಗಲು ಕೆಟ್ಟದಾಗಿ ಕೆಮೆಂಟ್ ಮಾಡುತ್ತಿದ್ದರು. ಹಾಗೂ ಜೋರಾಗಿ ನಗುವಂತಹ ಇಮೋಜಿ ಅದರ ಜೊತೆಗೆ ಹಾಕುತ್ತಿದ್ದರು.
ಒಂದು ದಿನ ದೇಕಾ ಹಾಕಿದ್ದ ಫೋಟೋಗೆ ನರೇಶ್ ಬರುವಾ ಮತ್ತು ಅಬ್ದುಲ್ ಸುಬರ್ ಚೌಧರಿ ಕಮೆಂಟ್ ಮಾಡಿದ್ದಾರೆ. ಇವನ್ನೇನು ಮೇಡಂ ಮೇಕಪ್ ಮಾಡಿಲ್ಲವೇ ಎಂದು ಆತ ಕಮೆಂಟ್ ಮಾಡಿ ನಗುವ ಇಮೋಜಿ ಹಾಕಿದ್ದ. ಅಮಿತ್ ಚಕ್ರವರ್ತಿ ಎಂಬಾತ ಈ ಕಾಮೆಂಟ್‌ಗೆ ನಗುವ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದ.
ಇದಕ್ಕೆ ಪ್ರತಿಕ್ರಿಸಿದ್ದ ದೇಕಾ ನಿಮಗೆ ಅದರಿಂದ ಏನು ಸಮಸ್ಯೆ ಎಂದು ಕೇಳಿದ್ದರು ಹಾಗೆ ಇದು ಮಾತಿಗೆ ಮಾತು ಬೆಳೆದಿತ್ತು. ನಂತರ ಮಹಿಳಾ ಅಧಿಕಾರಿ ಕೊಕ್ರಜಾರ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿ ಮೂವರಿಗೂ ನೋಟಿಸ್ ಜಾರಿ ಮಾಡಿದ್ದರು.
ಆದರೆ ಇತ್ತೀಚೆಗೆ ಆತನಿಗೆ ನೊಟೀಸ್ ಬಂದಿದ್ದು, ಅಮಿತ್ ಚಕ್ರವರ್ತಿ ನಗುವ ಇಮೋಜಿ ಹಾಕಿದ್ದ ಪರಿಣಾಮ ಜಾಮೀನು ಪಡೆಯಬೇಕಾಗಿದೆ. ಹಾಗೆ 200 ಕಿ.ಮೀ ಪ್ರಯಾಣಿಸಿ ಕೋರ್ಟ್‌ಗೆ ಹಾಜರಾಗಬೇಕಿದೆ . ಈ ಸಂಬಂಧ ಮಾತನಾಡಿದ್ದ ಆತ ವರ್ಣಾಲಿ ದೇಕಾ ಐಎಎಸ್ ಅಧಿಕಾರಿ ಅಥವಾ ಉಪ ಆಯುಕ್ತೆ ಎಂದು ನನಗೆ ತಿಳಿದಿರಲಿಲ್ಲ. ಅವರ ಯಾವುದೇ ಪೋಸ್ಟ್‌ಗೆ ನಾನು ಕಮೆಂಟ್ ಮಾಡಿಲ್ಲ. ಆದ್ರೆ ಒಂದೇ ಇಮೋಜಿ ಹಾಕಿದ್ದೆ. ಇದಕ್ಕೆ ಕೇಸ್ ಹಾಕಿದ್ದಾರೆ ಎಂದು ಆತ ಹೇಳಿಕೊಂಡಿದ್ದಾನೆ.
ಸದ್ಯ ಮೂವರು ಈ ಪೋಸ್ಟ್‌ಗಳಿಗೆ ಮಾಡಿರುವ ಕಮೆಂಟ್‌ಗಳ ಸ್ಕ್ರೀನ್ ಶಾಟ್‌ಗಳನ್ನ ದೂರಿನ ಜೊತೆಗೆ ಸಲ್ಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354D ಹಾಗೂ ಸೆಕ್ಷನ್ 354A ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.