ನ್ಯೂಸ್ ನಾಟೌಟ್: ಹೊಸ ಮೊಬೈಲ್ ಬೇಕು ಎಂದು ಹಠ ಹಿಡಿದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮರಾಠ ಮಂಡಳ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಥಮೇಶ ರಾಜು ಕೋಳಿ (17) ಆತ್ಮಹತ್ಯೆ ಮಾಡಿಕೊಂಡ ಹುಡುಗ. ತಂದೆಯ ಹುಟ್ಟುಹಬ್ಬದಂದೇ ಪುತ್ರ ಆತ್ಮಹತ್ಯೆಗೆ ಶರಣಾಗಿರುವುದು ವಿಪರ್ಯಾಸವೇ ಸರಿ. 2 ದಿನಗಳಿಂದ ಪ್ರಥಮೇಶ ಮೊಬೈಲ್ ಬೇಡಿಕೆಯಿಟ್ಟಿದ್ದ. ಮನೆಯಲ್ಲಿದ್ದ ಹಳೆ ಫೋನ್ ಬಳಸು. 4 ದಿನಗಳ ನಂತರ ಹೊಸ ಮೊಬೈಲ್ ಫೋನ್ ಸಿಗುತ್ತದೆ ಎಂದು ಪೋಷಕರು ಹೇಳಿದ್ದರು. ಆದರೆ, ಅದಕ್ಕೆ ಸಮಾಧಾನ ಪಡದ ಪ್ರಥಮೇಶ ಮಂಗಳವಾರ ಮಧ್ಯಾಹ್ನ ಮನೆಯಲ್ಲಿಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.