ನ್ಯೂಸ್ ನಾಟೌಟ್: ಇಲ್ಲೊಬ್ಬ ಆಟೋ ಚಾಲಕ ಒಂದೇ ಬಾರಿಗೆ ಬರೋಬ್ಬರಿ 19 ಜನರನ್ನು ರಿಕ್ಷಾದಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಸಂಚಾರ ನಿಯಮ ಉಲ್ಲಂಘಿಸಿ ಒಂದೇ ಬಾರಿಗೆ ಆಟೋದಲ್ಲಿ 19 ಜನ ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದು, ಒಂದೇ ಆಟೋದೊಳಗೆ ಇಷ್ಟೊಂದು ಜನರನ್ನು ಕಂಡು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.
ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
View this post on Instagram
ಈ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದ್ದು. ಫೆಬ್ರವರಿ 15 ಶನಿವಾರ ರಾತ್ರಿಯ ವೇಳೆ ಆಟೋ ಚಾಲಕ ತನ್ನ ಆಟೋದಲ್ಲಿ 19 ಜನರನ್ನು ಕೂರಿಸಿಕೊಂಡು ಬರುತ್ತಿದ್ದ ವೇಳೆ ಬರುವಾಸಾಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪಾಯಿಂಟ್ ಬಳಿ ಪೊಲೀಸರು ಆಟೋವನ್ನು ನಿಲ್ಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಅತ್ತೆಯನ್ನು ಸಾಯಿಸಲು ಮಾತ್ರೆ ಕೊಡಿ ಎಂದು ವೈದ್ಯರಿಗೆ ಸಂದೇಶ ಕಳುಹಿಸಿದ ಸೊಸೆ..! ವಾಟ್ಸಾಪ್ ಸಂದೇಶದ ಸ್ರ್ಕೀನ್ ಶಾಟ್ ಸಹಿತ ಪೊಲೀಸ್ ಠಾಣೆಗೆ ದೂರು ನೀಡಿದ ವೈದ್ಯ..! ವಿಡಿಯೋ ತಡವಾಗಿ ವೈರಲ್ ಆಗುತ್ತಿದೆ. ಆಟೋ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.