ನ್ಯೂಸ್ ನಾಟೌಟ್: ಮುಖ್ಯಶಿಕ್ಷಕನೊರ್ವ ಶಾಲೆಯ ಮಕ್ಕಳಿಂದ ಕೊಳಚೆ ಬೋರವೆಲ್ ಚರಂಡಿ ನೀರನ್ನು ಸ್ವಚ್ಚ ಮಾಡಿಸಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕಾಡಮಗೇರಾ (ಬಿ) ಪಂಚಾಯಿತಿಯ ವ್ಯಾಪ್ತಿಯ ಕ್ಯಾತನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಮುಖ್ಯಶಿಕ್ಷಕ ಶರಣಪ್ಪ ಬಾಗ್ಲಿ, ಶಾಲೆಯ ಮಕ್ಕಳಿಂದ ಚರಂಡಿ ಸ್ವಚ್ಛತೆಯನ್ನು ಸ್ವತಃ ಮುಂದೆ ನಿಂತು ಮಾಡಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಮುಖ್ಯ ಗುರುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮು ನಾಯಕ ಆಗ್ರಹಿಸಿದ್ದಾರೆ.
Few #Students of Govt Primary School in Kytnal of #Yadgir district are seen #cleaning the drain, allegedly on the orders of school staff.On the instructions of DDPI Yadgir,BEO Shahapur visited the school for inspection & issued a showcause notice to the Headmaster.@CMofKarnataka pic.twitter.com/kA2hMbCJeU
— Yasir Mushtaq (@path2shah) February 18, 2025
ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿಕ್ಕೆ ಒತ್ತಾಯಿಸಿದ್ದಾರೆ ಮತ್ತು ದೂರು ನೀಡಲಾಗಿದೆ.