ನ್ಯೂಸ್ ನಾಟೌಟ್: ಭಾರತದ ಅತ್ಯಂತ ಹಿರಿಯ ಹುಲಿಗಳಲ್ಲಿ ಒಂದಾಗಿದ್ದ ‘ರಾಜ’ ಪಶ್ಚಿಮ ಬಂಗಾಳದ ಅಲಿಪುರ್ದಾರ್ ಜಿಲ್ಲೆಯ ‘ಖೈರಿಬರಿ ಹುಲಿ ಮತ್ತು ಚಿರತೆ ರಕ್ಷಣಾ ಕೇಂದ್ರ’ದಲ್ಲಿ ಸೋಮವಾರ ಮೃತಪಟ್ಟಿದೆ. ಈ ಹುಲಿಗೆ 25 ವರ್ಷ 10 ತಿಂಗಳು ವಯಸ್ಸಾಗಿತ್ತು.
ಸಾವಿಗೆ ಏನು ಕಾರಣ? ದಕ್ಷಿಣ 24 ಪರಗಣ ಜಿಲ್ಲೆಯ ಮ್ಯಾಂಗ್ರೋವ್ ಅರಣ್ಯ ಮತ್ತು ಬಂಗಾಳದ ಹುಲಿಗಳ ವಾಸಸ್ಥಾನ ಸುಂದರಬನ್ ನಲ್ಲಿ ಮೊಸಳೆ ದಾಳಿಯಿಂದ ಗಾಯಗೊಂಡಿದ್ದ ಈ ವ್ಯಾಘ್ರನನ್ನು ಆಗಸ್ಟ್ 2008 ರಲ್ಲಿ ರಕ್ಷಣಾ ಕೇಂದ್ರಕ್ಕೆ ತರಲಾಗಿತ್ತು ಎಂದು ದೀಪಕ್ ಹೇಳಿದರು. ಅಂದಿನಿಂದ ರಾಜ ಇಲ್ಲಿಯೇ ಇತ್ತು. ರಾಜ ಕಳೆದ ಕೆಲವು ತಿಂಗಳುಗಳಿನಿಂದ ವಯೋ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿತ್ತು. ಬಹು ಅಂಗಾಂಗ ವೈಫಲ್ಯದ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ ಮೃತಪಟ್ಟಿದೆ ಎಂದು ದೀಪಕ್ ಹೇಳಿದರು.