ನ್ಯೂಸ್ ನಾಟೌಟ್: ಇತ್ತೀಚೆಗೆ ಹೆಚ್ಚಿನವರು ವಧುವರರ ಹುಡುಕಾಟಕ್ಕಾಗಿ ವೈವಾಹಿಕ ವೆಬ್ ಸೈಟ್ ಗಳು ಮತ್ತು ಅಪ್ಲಿಕೇಶನ್ ಗಳನ್ನು ಅವಲಂಬಿಸಿಕೊಂಡಿರುತ್ತಾರೆ. ಈ ಮೂಲಕ ತಮಗೆ ಹೊಂದಾಣಿಕಯಾಗುವ ಯೋಗ್ಯ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ತಮ್ಮ ಪರಿಚಯಸ್ಥರು ಮತ್ತು ಸಂಬಂಧಿಕರಲ್ಲಿ ಒಳ್ಳೆಯ ಹುಡುಗ ಅಥವಾ ಹುಡುಗಿ ಎಲ್ಲಾದರೂ ಇದ್ದರೆ ತಿಳಿಸಿ ಎಂದು ಹೇಳುವುದನ್ನು ನೋಡಿರಬಹುದು.
ಕೆಲವರು ವಧು ಬೇಕಾಗಿದ್ದಾರೆ ಅಥವಾ ವರ ಬೇಕಾಗಿದ್ದಾರೆ ಪತ್ರಿಕೆಯಲ್ಲಿ ಜಾಹಿರಾತು ಪ್ರಕಟಿಸುವುದನ್ನು ನೋಡಿರಬಹುದು. ಇದೀಗ ವೈರಲ್ ಆಗಿರುವ ಜಾಹಿರಾತಿನಲ್ಲಿ ತನ್ನ 28 ವರ್ಷದ ಮಗಳಿಗೆ ಮಾರ್ವಾಡಿ ಅಥವಾ ಗುಜರಾತಿ ಹುಡುಗನನ್ನು ಹುಡುಕುತ್ತಿದ್ದೇವೆ ಎಂದು ಜಾಹೀರಾತು ನೀಡಿದ್ದು ಭಾರೀ ವೈರಲ್ ಆಗಿದೆ.
ಪತ್ರಿಕೆಯೊಂದರಲ್ಲಿ ಪ್ರಕಟವಾದ ಈ ಜಾಹೀರಾತಿನಲ್ಲಿ, “500 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ಮುಂಬೈ ಮೂಲದ ಉದ್ಯಮಿ ಕುಟುಂಬವು ತಮ್ಮ ಮಗಳ (28 ವರ್ಷ) ಮದುವೆಗೆ ಸೂಕ್ತವಾದ ಮಾರ್ವಾಡಿ ಅಥವಾ ಗುಜರಾತಿ ಹುಡುಗನನ್ನು ಹುಡುಕುತ್ತಿದ್ದೇವೆ” ಎಂದು ಜಾಹಿರಾತಿನಲ್ಲಿ ತಿಳಿಸಿದೆ. ಇಂತಹ ಜಾಹೀರಾತುಗಳಲ್ಲಿ ವಧು ವರರ ವಯಸ್ಸು, ಎತ್ತರ, ಶೈಕ್ಷಣಿಕ ಹಿನ್ನೆಲೆ ಮತ್ತು ಉದ್ಯೋಗದಂತಹ ವೈಯಕ್ತಿಕ ವಿವರಗಳನ್ನು ನೋಡಬಹುದು. ಆದರೆ ಇಲ್ಲಿ ವರ ಬೇಕಾಗಿರುವ ಕುಟುಂಬದ ಮಾರುಕಟ್ಟೆ ಮೌಲ್ಯದ ಬಗ್ಗೆ ಮಾಹಿತಿ ನೀಡಿದೆ.
ಕೆಲವರ ಪ್ರಕಾರ ಇದು ವಂಚನೆ ಎನ್ನಲಾಗಿದ್ದು, ಅಷ್ಟು ಆಸ್ತಿ ಉಳ್ಳವರು ಈ ರೀತಿ ಜಾಹಿರಾತು ಹಾಕುವುದಿಲ್ಲ. ಇದು ಯಾವುದೋ ವಂಚನೆಯ ಎಜೆಂಟ್ ಗಳ ಜಾಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.