ನ್ಯೂಸ್ ನಾಟೌಟ್: ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಮಯ್ಯ ಲೇಔಟ್ ನಡೆದಿದೆ. ಶ್ರುತಿ(33) ಆತ್ಮಹತ್ಯೆಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ.
ಶ್ರುತಿ ಮೊದಲು ತನ್ನ ಐದು ವರ್ಷದ ಮಗಳು ರೋಷಿಣಿಯನ್ನು ಕೊಂದು ಬಳಿಕ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಟವಾಡಲು ಹೊರಹೋಗಿದ್ದ ಪುತ್ರ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಇನ್ನು ಆತ್ಮಹತ್ಯೆಗೆ ಮುನ್ನ ಶ್ರುತಿ ಡೆತ್ನೋಟ್ ಬರೆದಿಟ್ಟಿದ್ದು, ಡೆತ್ನೋಟ್ನಲ್ಲಿ ಗಂಡ ಪರಸ್ತ್ರಿಯೊಂದಿಗಿನ ಅನೈತಿಕ ಸಂಬಂಧದ ಹೊಂದಿರುವ ಬಗ್ಗೆ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:17ರ ಬಾಲಕಿ ಮೇಲೆ ಅತ್ಯಾಚಾರ..! ಮೃತ ವ್ಯಕ್ತಿಯ ವಿರುದ್ಧ ಕೇಸ್ ದಾಖಲು..!
10 ವರ್ಷದ ಹಿಂದೆ ಶ್ರುತಿ ಚಾರ್ಟರ್ಡ್ ಅಕೌಂಟೆಂಟ್ ಜತೆ ಮದುವೆಯಾಗಿದ್ದರು. ಅಲ್ಲದೇ ಶ್ರುತಿ ಗ್ರಾಮ ಪಂಚಾಯಿತಿ ಒಂದರ ಅಧ್ಯಕ್ಷೆಯಾಗಿದ್ದು, ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇದೆ. ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಶ್ರುತಿ, ಪುತ್ರಿ ರೋಹಿಣಿಯನ್ನು ಕೊಂದು ಬಳಿಕ ತಾನೂ ಸಹ ನೇಣಿಗೆ ಶರಣಾಗಿದ್ದಾರೆ. ಇನ್ನು ಗಂಡು ಮಗು ಆಟವಾಡಲು ಮನೆಬಿಟ್ಟು ಆಚೆ ಹೋಗಿದ್ದರಿಂದ ಆ ಕಂದ ಬಚಾವ್ ಆಗಿದೆ.
ಡೆತ್ ನೋಟ್ ಬರೆದಿಟ್ಟು ಪತಿ ವಿವಾಹೇತರ ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಬಾಗಲಗುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತ ಶ್ರುತಿ ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.