Latestಸಿನಿಮಾಸುಳ್ಯ

ಸುಳ್ಯ: ನಟ ದರ್ಶನ್ ಅಭಿಮಾನಿಗಳಿಂದ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ, ಅಂಗನವಾಡಿ ಮಕ್ಕಳಿಗೆ ಪುಸ್ತಕ, ಪೆನ್ಸಿಲ್ ಮತ್ತು ಸಿಹಿ ತಿಂಡಿ ವಿತರಣೆ

598
Spread the love

ನ್ಯೂಸ್ ನಾಟೌಟ್: ಸುಳ್ಯದಲ್ಲೂ ದರ್ಶನ್ ತೂಗುದೀಪ ಅಪ್ಪಟ ಅಭಿಮಾನಿ ಜಗ್ಗೇಶ್ ಸಂಕೇಶ ಮತ್ತು ಸ್ನೇಹಿತರು ಸೇರಿ ಡಿ ಬಾಸ್ ಗಜಪಡೆ ಸಂಕೇಶ ಎಂಬ ಬಳಗದ ಮೂಲಕ ಚಿತ್ರ ನಟ ದರ್ಶನ್ ರ 48 ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.

ಆ ಪ್ರಯುಕ್ತ ಕುಕ್ಕುಜಡ್ಕ ಹಾಗೂ ಅಡ್ಕರ್ ಅಂಗನವಾಡಿ ಮಕ್ಕಳಿಗೆ ಪುಸ್ತಕ ಮತ್ತು ಪೆನ್ಸಿಲ್ ನೀಡಿ, ಸಿಹಿ ತಿಂಡಿ ಹಂಚಿ ಸಂಭ್ರಮಿಸಿದ್ದಾರೆ.
ಈ ವೇಳೆ ಅಂಗನವಾಡಿ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸುಳ್ಯ ಬಸ್ ಸ್ಟಾಂಡ್ ಬಳಿ ಹುಟ್ಟುಹಬ್ಬದ ಬ್ಯಾನರ್ ಅಳವಡಿಸಿ ಡಿ ಬಾಸ್ ಗಜಪಡೆ ಸಂಘಟನೆಯೊಂದಿಗೆ ಜಗ್ಗೇಶ್ ಸಂಕೇಶ ಮತ್ತು ವಿನೋದ್ ಪೈಲೂರು ವಿಶೇಷ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

16 ಫೆಬ್ರವರಿಯಂದು ದರ್ಶನ್ ಹುಟ್ಟುಹಬ್ಬವನ್ನು ಈ ಬಾರಿ ಸರಳವಾಗಿ ಆಚರಿಸಿಕೊಂಡಿದ್ದಾರೆ.

ಸತೀಶ್ ಅಡ್ಕರ್, ಜಯಂತ್ ಕಾರ್ಯತಡ್ಕ, ಗಣೇಶ್ ಬಂಬಿಲ, ಲೋಹಿತ್ ನಡುಗಲ್ಲು, ಉದಯ್ ಅಡ್ಪಂಗಾಯ, ನವನೀತ್, ಮೋಕ್ಷಿತ್ ನೆಟ್ಟಾರು, ಇಂದ್ರೇಶ್, ಯಕ್ಷಿತ್ ಕಮಿಲ, ಕೀರ್ತನ್ ಸಂಕೇಶ ಹಾಗೂ ಮಹಿಳಾ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

See also  ಬಿ.ಸಿ.ರೋಡ್ ನಲ್ಲಿ ಕಾರಿಗೆ ಖಾಸಗಿ ಬಸ್ ಢಿಕ್ಕಿ..! ಕಾರು ಸಂಪೂರ್ಣ ಜಖಂ, ಚಾಲಕನಿಗೆ ಗಂಭೀರ ಗಾಯ..!
  Ad Widget   Ad Widget   Ad Widget