Latestಸುಳ್ಯ

ಅಂಕತ್ತಡ್ಕ:ಓಡ್ರಪ್ಪೋ ಓಡಿ.. ಕಾಡುಕೋಣಗಳು ಬಂದ್ವು..!ಜನರನ್ನು ಕ್ಯಾರೇ ಮಾಡದೇ ಹಾಡಹಗಲಲ್ಲೇ ರಸ್ತೆಯಲ್ಲಿ ಹೇಗೆ ಓಡಾಡ್ತಿವೆ ನೋಡಿ..!

772
Spread the love

ನ್ಯೂಸ್‌ ನಾಟೌಟ್‌ :ಕಾಡು ಪ್ರಾಣಿಗಳ ಉಪಟಳ ಜೋರಾಗಿದೆ.ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಅಲ್ಲಲ್ಲಿ ಕಾಡು ಪ್ರಾಣಿಗಳು ಕಾಣ ಸಿಗುತ್ತಿದ್ದು ಕೆಲವೊಂದು ಕಡೆ ತೊಂದರೆ ಅನುಭವಿಸುತ್ತಿರುವ ಘಟನೆ ಬಗ್ಗೆಯೂ ವರದಿಯಾಗಿದೆ.ಆನೆ,ಹುಲಿ,ಚಿರತೆ ಸೇರಿದಂತೆ ಕಾಡು ಕೋಣಗಳ ಪ್ರತ್ಯಕ್ಷದಿಂದಾಗಿ ಜನ ಕಂಗಾಲಾಗಿದ್ದಾರೆ. ಇದೀಗ ಮಾಡಾವು-ಬೆಳ್ಳಾರೆ ರಸ್ತೆಯ ಅಂಕತಡ್ಕದಲ್ಲಿ ಹಾಡುಹಗಲೇ ಕಾಡುಕೋಣ ಸಂಚಾರ ಕಂಡುಬಂದಿದ್ದು, ಸ್ಥಳೀಯರ ನಿದ್ದೆಗೆಡಿಸುವಂತೆ ಮಾಡಿದೆ.

ಕಳೆದ ಕೆಲವರ್ಷಗಳಿಂದ ಈ ಭಾಗದಲ್ಲಿ ನಿರಂತರವಾಗಿ ಕಾಡುಕೋಣಗಳು ಸಂಚರಿಸುತ್ತಿದ್ದು, ರಸ್ತೆಯಲ್ಲಿ ಸಾಗುವ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಆತಂಕ ಎದುರಾಗಿದೆ.ವಿಶೇಷವಾಗಿ ಹಾಡಹಗಲಲ್ಲೇ ಕಾಡುಕೋಣಗಳು ಕಂಡು ಬಂದರೆ ದಾರಿಹೋಕರ , ವಿದ್ಯಾರ್ಥಿಗಳ ಹಾಗೂ ವಾಹನ ಸವಾರರ ಪಾಡೇನು? ಎಂಬ ಚಿಂತೆ ಕಾಡಿದೆ.

See also  ಸುಳ್ಯ: ಹುಲ್ಲು-ಗಿಡಗಳು ಬೆಳೆದು ತುಕ್ಕು ಹಿಡಿಯುವ ಹಂತದಲ್ಲಿರುವ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನ..! ಅನಾಥವಾಗಿರುವ ವಾಹನಗಳಿಗೆ ಮುಕ್ತಿ ಸಿಗುವುದೆಂದು..?
  Ad Widget   Ad Widget   Ad Widget