Latestಕ್ರೈಂ

9 ವರ್ಷ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಬಂಧನಕ್ಕೆ ಸೋಶಿಯಲ್‌ ಮೀಡಿಯಾ ನೀಡಿದ ಸುಳಿವು!!ಮಗನ ಹೆಸರಲ್ಲಿ ಇನ್ಸ್ಟಾ ಖಾತೆ,ಆನ್‌ಲೈನ್‌ನಲ್ಲಿ ಫುಡ್‌ ಆರ್ಡರ್‌!!ಸಿಕ್ಕಿ ಬಿದ್ದದ್ದೇಗೆ?

610
Spread the love

ನ್ಯೂಸ್‌ ನಾಟೌಟ್‌: ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುವ ಬೆಕ್ಕು ನಾನು ಯಾರಿಗೂ ಕಾಣ್ಸಲ್ಲ ಅಂತ ಭಾವಿಸುತ್ತೆ. ಈ ಗಾದೆ ಮಾತು ಎಂದಿಗೂ ಪ್ರಸ್ತುತ. ನಾವು ತಪ್ಪು ಮಾಡಿದಾಗ ಒಂದಲ್ಲ ಒಂದು ದಿನ ಸತ್ಯ ಬಯಲಾಗದೇ ಇರಲ್ಲ.ಅದು ಈಗಿನ ಕಾಲದಲ್ಲಿ ಕ್ರೈಮ್‌ ರಿಲೇಟೆಡ್‌ ಘಟನೆಗಳಾದಾಗ ರಂಗೋಲಿಯೊಳಗೆ ಕಳ್ಳ ನುಗ್ಗಿದರೂ ಆತನನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸ್‌ ತಂಡ ಮಾಡುತ್ತೆ. ಇದೀಗ ೯ ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಮೋಸ್ಟ್‌ ವಾಂಟೆಡ್‌ ರೌಡಿ ಶೀಟರ್‌ ಒಬ್ಬ ಸಾಮಾಜಿಕ ಜಾಲತಾಣದ ಮೂಲಕ ಸಿಕ್ಕಿ ಬಿದ್ದ ಘಟನೆ ಬಗ್ಗೆ ವರದಿಯಾಗಿದೆ.

ಸಿಕ್ಕಿ ಬಿದ್ದಿದ್ದೇಗೆ?

ಬೆಂಗಳೂರು ಪೊಲೀಸರಿಗೆ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ 35 ವರ್ಷದ ರೌಡಿಶೀಟರ್ ಅನ್ನು ಬಂಧಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಈತ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ ಸೇರಿದಂತೆ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿದಾಗ ಈತ ಸಿಕ್ಕಿ ಹಾಕಿಕೊಂಡಿದ್ದಾನೆ.ಮೊಹಮ್ಮದ್ ಫಾರೂಕ್ ಎಂಬಾತ ಮೋಸ್ಟ್‌ ವಾಂಟೆಡ್‌ ರೌಡಿ ಶೀಟರ್‌. ಕೊಲೆ ಯತ್ನ ಸೇರಿದಂತೆ ಏಳು ಪ್ರಕರಣಗಳಿದ್ದವು. ಕಳೆದ ಒಂಬತ್ತು ವರ್ಷ ಈತ ಬಂಧನದಿಂದ ತಪ್ಪಿಸಿಕೊಂಡಿದ್ದು, ಮಡಿವಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್‌ ಆಗಿದ್ದ . 2012ರಲ್ಲಿ ಅಪರಾಧ ಕೃತ್ಯ ಎಸಗಿದ್ದು, 2016ರವರೆಗೂ ಭೂಗತನಾಗಿದ್ದ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ನಲ್ಲಿರುವ ಅವರ ಸೋದರ ಮಾವ ಸೇರಿದಂತೆ ಫಾರೂಕ್ ಅವರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಯಿತು. ಆದರೆ, ಆತನ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಆತನ ಪತ್ನಿ ರೌಡಿಶೀಟರ್ ಜಾನಿ ಎಂಬಾತನ ಸಹೋದರಿಯಾಗಿದ್ದಾರೆ. ಪೊಲೀಸರು ಜಾನಿಯನ್ನು ವಿಚಾರಣೆಗೊಳಪಡಿಸಿದರೂ, ಫಾರೂಕ್‌ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿರಲಿಲ್ಲ.ಬಳಿಕ ಇನ್‌ಸ್ಟಾಗ್ರಾಂನಲ್ಲಿ ವಿಧಾನಸೌಧದ ಮುಂಭಾಗ ನಿಂತಿರುವ ಫಾರೂಕ್‌ ಫೋಟೊವನ್ನು ಹಂಚಿಕೊಳ್ಳಲಾಗಿತ್ತು. ಇದನ್ನು ನೋಡಿದ ಮಾಹಿತಿದಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಗನ ಹೆಸರಲ್ಲಿ ಖಾತೆ :

ತನಿಖೆಯ ವೇಳೆ ಫಾರೂಕ್ ತನ್ನ ಮಗನ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆಯನ್ನು ಹೊಂದಿರುವುದು ಪತ್ತೆಯಾಗಿದೆ. ಪೊಲೀಸರು ಐಪಿ ವಿಳಾಸವನ್ನು ತೆಗೆದುಕೊಂಡಾಗ ಫಾರೂಕ್‌ನ ಮೊಬೈಲ್ ಸಂಖ್ಯೆ ತಿಳಿದುಬಂದಿದೆ. ಟವರ್ ಆಧರಿಸಿ ಆತ ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದಲ್ಲಿ ವಾಸವಾಗಿರುವುದು ಪೊಲೀಸರಿಗೆ ತಿಳಿದಿದೆ. ಇದು ಆತನ ನಿಖರವಾದ ಸ್ಥಳವನ್ನು ಕಂಡುಹಿಡಿಯಲು ನೆರವಾಗದ ಕಾರಣ, ಆ ಮೊಬೈಲ್ ಫೋನ್ ಸಂಖ್ಯೆಯಿಂದ ಯಾವುದಾದರೂ ಬುಕಿಂಗ್ ಆಗಿದೆಯೇ ಎಂಬುದನ್ನು ಕಂಡುಹಿಡಿಯಲು ಆನ್‌ಲೈನ್ ಫುಡ್ ಅಗ್ರಿಗೇಟರ್‌ಗಳನ್ನು ಸಂಪರ್ಕಿಸಿದ್ದಾರೆ. ಇದು ಫಾರೂಕ್ ನಿವಾಸದ ವಿಳಾಸವನ್ನು ಬಹಿರಂಗಪಡಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

See also  ವಿಟ್ಲ: ಈ.ಡಿ. ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆ ದರೋಡೆ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ..! ಕೇರಳದ ಪೊಲೀಸ್ ಅಧಿಕಾರಿ ಅರೆಸ್ಟ್..!
  Ad Widget   Ad Widget   Ad Widget