ನ್ಯೂಸ್ ನಾಟೌಟ್: ಸಿನಿಮಾ ನಿರ್ಮಾಪಕಿಯೊಬ್ಬರು, ಭಾರತೀಯ ಸೈನಿಕರಿಗೆ ಅಪಮಾನ ಎಸಗಿದ್ದಾರೆ ಎಂಬ ಆರೋಪ ಹೊತ್ತಿದ್ದು, ನಿರ್ಮಾಪಕಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಭಾರತೀಯ ಟಿವಿ ಲೋಕದ ಬಾದ್ ಶಾ, ಕಿಂಗ್ ಮೇಕರ್ ಎಂದೇ ಕರೆಯಲಾಗುವ ಏಕ್ತಾ ಕಪೂರ್ ವಿರುದ್ಧ ಇದೀಗ ಪ್ರಕರಣ ದಾಖಲಾಗಿದ್ದು, ಏಕ್ತಾ ಕಪೂರ್, ಭಾರತೀಯ ಸೈನಿಕರಿಗೆ ಅಪಮಾನ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಹಲವಾರು ಟಿವಿ ಧಾರಾವಾಹಿಗಳ ನಿರ್ಮಾಪಕಿ ಆಗಿರುವ ಏಕ್ತಾ ಕಪೂರ್ ಆಲ್ಟ್ ಬಾಲಾಜಿ ಹೆಸರಿನ ಒಟಿಟಿಯನ್ನೂ ಸಹ ನಡೆಸುತ್ತಿದ್ದು, ಈ ಆಲ್ಟ್ ಬಾಲಾಜಿ ಒಟಿಟಿಯಲ್ಲಿ ಸಾಫ್ಟ್ ಪಾರ್ನ್ ರೀತಿಯ ವೆಬ್ ಸರಣಿ, ಸಿನಿಮಾಗಳನ್ನು ಮಾತ್ರವೇ ಪ್ರಸಾರ ಮಾಡಲಾಗುತ್ತದೆ.
ಇಂಥಹುದೇ ಸಾಫ್ಟ್ ಪಾರ್ನ್ ವೆಬ್ ಸರಣಿಯೊಂದರಲ್ಲಿ ಸೈನಿಕರ ಪಾತ್ರವನ್ನು ಬಳಸಿಕೊಳ್ಳಲಾಗಿದ್ದು, ಸೈನಿಕ ತನ್ನ ಸಮವಸ್ತ್ರದಲ್ಲಿದ್ದಾಗಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಈ ವಿಷಯವಾಗಿ ಯೂಟ್ಯೂಬರ್ ವಿಕಾಸ್ ಪಾಠಕ್ (ಹಿಂದೂಸ್ತಾನಿ ಬಾವ್) ಪೊಲೀಸ್ ಠಾಣೆಗೆ ಏಕ್ತಾ ಕಪೂರ್ ವಿರುದ್ಧ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಎಫ್ಐಆರ್ ನಮೂದು ಮಾಡಿಕೊಂಡಿದ್ದರು. ಆದರೆ ವಿಚಾರಣೆ ನಡೆಸಿರಲಿಲ್ಲ. ಇದೀಗ ನ್ಯಾಯಾಲಯವು, ಪೊಲೀಸರಿಗೆ ಸೂಚನೆ ನೀಡಿದ್ದು, ಏಕ್ತಾ ಕಪೂರ್ ವಿಚಾರಣೆ ನಡೆಸಿ, ಮೇ 9ರ ಒಳಗಾಗಿ ವರದಿ ನೀಡುವಂತೆ ಸೂಚಿಸಿದೆ.
ಯೂಟ್ಯೂಬರ್ ವಿಕಾಸ್ ಪಾಠಕ್ (ಹಿಂದೂಸ್ತಾನಿ ಬಾವ್) ಏಕ್ತಾ ಕಪೂರ್ ವಿರುದ್ಧ ದೂರು ನೀಡಿ ಬಹಳ ಸಮಯವೇ ಆಗಿದೆ. ಸೆಕ್ಷನ್ 202 ಅಡಿಯಲ್ಲಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಏಕ್ತಾ ಕಪೂರ್ ವಿಚಾರಣೆ ನಡೆಸಿರಲಿಲ್ಲ. ಏಕ್ತಾ ಕಪೂರ್ ಮಾತ್ರವೇ ಅಲ್ಲದೆ, ಆಲ್ಟ್ ಬಾಲಾಜಿಯ ಇತರೆ ಸಹ ಮಾಲೀಕರು, ಆ ವೆಬ್ ಸರಣಿಯ ನಿರ್ದೇಶಕರು ಇನ್ನೂ ಕೆಲವರ ವಿರುದ್ಧ ದೂರು ದಾಖಲಾಗಿದೆ.
Click 👇🏻
ಸಿಎಂ ಕಚೇರಿಯ ‘ಕಚೇರಿ ಟಿಪ್ಪಣಿ’ ನಕಲು ಪ್ರಕರಣ..! ಹಲವಾರು ಎಂ.ಎಲ್.ಎಗಳ ಬಳಿ ಪಿಎ ಆಗಿದ್ದವ ಅರೆಸ್ಟ್..!
ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಕುಂಭಮೇಳಕ್ಕೆ ಹೊರಟಿದ್ದ 18 ಭಕ್ತರು ಸಾವು..! ಮೋದಿ ಸಂತಾಪ
ಅಮೆರಿಕದಿಂದ ಭಾರತೀಯರ 2 ಹಂತದ ಗಡಿಪಾರು..! ಅಮೃತಸರದಲ್ಲಿ ಬಂದಿಳಿದ 119 ಮಂದಿ..!
ನಾಣ್ಯಗಳಿಂದ ಕಾರನ್ನು ಅಲಂಕರಿಸಿದ ರಾಜಸ್ತಾನಿ ವ್ಯಕ್ತಿ..! ವಿಡಿಯೋ ವೈರಲ್
ನಟ ದರ್ಶನ್ ಹುಟ್ಟುಹಬ್ಬದ ದಿನವೇ ಅಭಿಮಾನಿಗಳು ಹಾಕಿದ್ದ ಬ್ಯಾನರ್ ಕಿತ್ತೆಸೆದ ಪುರಸಭೆ ಸಿಬ್ಬಂದಿ..! ಇಲ್ಲಿದೆ ಕಾರಣ
ಕುಂಭಮೇಳದಲ್ಲಿ ಸನ್ಯಾಸಿ ವೇಷ ತೊಟ್ಟು ತಲೆ ಮರೆಸಿಕೊಂಡಿದ್ದ ಆರೋಪಿ..! ಆತನನ್ನು ಹಿಡಿಯಲು ಸನ್ಯಾಸಿಗಳಾದ ಪೊಲೀಸರು..!