Latestರಾಜಕೀಯ

ದೆಹಲಿ ಮುಖ್ಯ ಮಂತ್ರಿ ಪ್ರಮಾಣವಚನ ಕಾರ್ಯಕ್ರಮ ಫೆ.19 ಅಥವಾ 20ಕ್ಕೆ?ಯಾರಾಗಲಿದ್ದಾರೆ ದೆಹಲಿ ಸಿಎಂ?

1.4k
Spread the love

ನ್ಯೂಸ್‌ ನಾಟೌಟ್‌ : ದೆಹಲಿ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಆಡಳಿತಾರೂಢ ಎಎಪಿ ಸೋಲು ಕಂಡಿದೆ. 3 ಸಲ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರು 4000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಇದರೊಂದಿಗೆ ಪರ್ವೇಶ್‌ ವರ್ಮಾ ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.

ಸದ್ಯ ಸಿಎಂ ರೇಸ್‌ನಲ್ಲಿ ರೇಖಾ ಗುಪ್ತಾ, ಆಶೀಷ್‌ ಸೂದ್‌ ಹಾಗೂ ಶಿಖಾ ಸೇರಿ ಹಲವರಿದ್ದಾರೆ. ಸಂಪುಟ ಸೇರುವ 15 ಶಾಸಕರ ಪಟ್ಟಿ ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.ಬಲ್ಲ ಮೂಲಗಳ ಪ್ರಕಾರ ಫೆ.17ರಂದು ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಈ ವೇಳೆ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ ಎನ್ನಲಾಗಿದೆ. ಜತೆಗೆ ಅದ್ದೂರಿ ಕಾರ್ಯಕ್ರಮಕ್ಕಾಗಿ ಬಿಜೆಪಿಯು ನೆಹರು ಕ್ರೀಡಾಂಗಣ, ರಾಮಲೀಲಾ ಮೈದಾನ ಸೇರಿ ಹಲವು ಸ್ಥಳಗಳನ್ನು ಪರಗಣಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

See also  ಮಂಗಳೂರು: ಮಹಿಳಾ ಅಧಿಕಾರಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ರು ಎಂದ ವ್ಯಕ್ತಿ..! ಲಾಡ್ಜ್‌ ನಲ್ಲಿ ಆತ ಆತ್ಮಹತ್ಯೆ..!
  Ad Widget   Ad Widget   Ad Widget