ನ್ಯೂಸ್ ನಾಟೌಟ್: ಸುಳ್ಯದ ಪೆಟ್ರೋಲ್ ಬಂಕ್ ವೊಂದರಲ್ಲಿ ಪೆಟ್ರೋಲ್ ಹಾಕಿಸಿಕೊಂಡ ಗ್ರಾಹಕರೊಬ್ಬರು ಬೆಚ್ಚಿ ಬಿದ್ದಿರುವ ಪ್ರಸಂಗವೊಂದು ನಡೆದಿದೆ.
ತಮ್ಮ ವಾಹನಕ್ಕೆ ಹಾಕಿಸಿಕೊಂಡ ಕೇವಲ 1 ಲೀಟರ್ ಪೆಟ್ರೋಲ್ ಗೆ 1 ಸಾವಿರ ರೂ. ಬಿಲ್ ಬಂದಿದೆ. ಇದನ್ನು ನೋಡಿ ಗ್ರಾಹಕ ಮೂರ್ಛೆ ತಪ್ಪುವುದೊಂದು ಬಾಕಿ ಇತ್ತು. ಈ ಆಘಾತದಿಂದ ಚೇತರಿಸಿಕೊಂಡ ಬಳಿಕ ಎಲ್ಲೋ ಎಡವಟ್ಟಾಗಿದೆ ಎಂದು ಬಂಕ್ ನವರಿಗೂ ಮನವರಿಕೆ ಆಗಿದೆ. ಬಳಿಕ ಅದನ್ನು ಪರಿಷ್ಕೃತ ಬಿಲ್ ನೀಡುವ ಮೂಲಕ ಸರಿಪಡಿಸಿಕೊಳ್ಳಲಾಗಿದೆ.
ಕೆಲವು ಸಲ ಆಚಾತುರ್ಯದಿಂದ ಅಥವಾ ತಾಂತ್ರಿಕ ದೋಷಗಳಿಂದ ಇಂತಹ ಎಡವಟ್ಟುಗಳು ಆಗುವುದುಂಟು ಇದರಲ್ಲಿ ದೊಡ್ಡ ವಿಷಯವೇನಿಲ್ಲ ಬಿಡಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಈ ಬಿಲ್ ಫೋಟೋ ಮಾತ್ರ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ.