ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಹೊಸ ಸಚಿವ ಸಂಪುಟದ ಅಧಿಕೃತ ಪಟ್ಟಿ ನಾಳೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಈ ಪಟ್ಟಿಯಲ್ಲಿ ಸುಳ್ಯದ ಬಂಗಾರ ಸೋಲಿಲ್ಲದ ಸರದಾರ ಅಂಗಾರ ಅವರಿಗೂ ಸ್ಥಾನ ನೀಡಲಾಗಿದೆ. ಒಟ್ಟು 31 ಮಂದಿ ಸಚಿವರ ಸಂಭಾವ್ಯ ಪಟ್ಟಿ ನ್ಯೂಸ್ ನಾಟೌಟ್ ವೆಬ್ ಸೈಟ್ಗೆ ಲಭ್ಯವಾಗಿದೆ. ಈ ಪಟ್ಟಿಯಲ್ಲಿರುವ ಹೆಸರುಗಳು ಹೀಗಿದೆ ನೋಡಿ:
ಎಸ್. ಆರ್.ಬೊಮ್ಮಾಯಿ (ಮುಖ್ಯಮಂತ್ರಿ, ಗೃಹ, ಬಿಡಿಎ), ಆರ್.ಅಶೋಕ್ (ಉಪ ಮುಖ್ಯಮಂತ್ರಿ, ಕಂದಾಯ), ಅರವಿಂದ ಲಿಂಬಾವಳಿ (ಉಪ ಮುಖ್ಯಮಂತ್ರಿ ಸಮಾಜ ಕಲ್ಯಾಣ), ಡಾ.ಅಶ್ವಥ್ ನಾರಾಯಣ, (ಉನ್ನತ ಶಿಕ್ಷಣ ಐಟಿ,ಬಿಟಿ), ಮಾಧು ಸ್ವಾಮಿ (ಲೋಕೋಪಯೋಗಿ), ಮುರುಗೇಶ್ ನಿರಾಣಿ (ಗ್ರಾಮೀಣಾಭಿವೃದ್ಧಿ), ಅರವಿಂದ ಬೆಲ್ಲದ (ಸಾರಿಗೆ), ಬಸವರಾಜ್ ಪಾಟೀಲ್ ಯತ್ನಾಳ್ (ಶಿಕ್ಷಣ), ಬಾಲಚಂದ್ರ ಜಾರಕಿ ಹೊಳಿ (ಬೃಹತ್ ಮತ್ತು ಮಧ್ಯಮ ನಿರಾವರಿ), ಬೈರತಿ ಬಸವರಾಜ್ (ನಗರಾಭಿವೃದ್ಧಿ), ಎಸ್.ಟಿ.ಸೋಮಶೇಖರ್ (ಸಹಕಾರ), ಡಾ.ಸುಧಾಕರ್ (ವೈದ್ಯಕೀಯ ಶಿಕ್ಷಣ), ಕೆ.ಗೋಪಾಲಯ್ಯ (ಆಹಾರ ಮತ್ತು ನಾಗರಿಕ ಸರಬರಾಜು), ಉಮೇಶ್ ಕತ್ತಿ (ವಸತಿ), ಎಸ್.ರಾಮದಾಸ್ (ಆರೋಗ್ಯ), ಪಿ.ರಾಜೀವ್ (ಕೃಷಿ), ಬೋಪಯ್ಯ (ಕನ್ನಡ ಮತ್ತು ಸಂಸ್ಕೃತಿ, ಕ್ರೀಡೆ), ಬಿಸಿ. ಪಾಟೀಲ್ (ಗಣಿ ಮತ್ತು ಭೂ ವಿಜ್ಞಾನ), ಕೋಟಾ ಶ್ರೀನಿವಾಸ ಪೂಜಾರಿ (ಮುಜರಾಯಿ , ಮೀನುಗಾರಿಕೆ, ಬಂದರು), ದತ್ತಾತ್ರೇಯ ಪಾಟೀಲ್ (ಕೈಮಗ್ಗ, ಜವಳಿ, ಅಲ್ಪಸಂಖ್ಯಾಥ), ಶಿವನ ಗೌಡ ನಾಯಕ್ (ಕಾರ್ಮಿಕ ಮತ್ತು ಸಕ್ಕರೆ), ಸುನಿಲ್ ಕುಮಾರ್ (ಕಾನೂನು), ತಿಪ್ಪಾರೆಡ್ಡಿ (ಅರಣ್ಯ), ಪೂರ್ಣಿಮಾ ಶ್ರೀನಿವಾಸ್ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ), ರೇಣುಕಾಚಾರ್ಯ (ಸಣ್ಣ ನೀರಾವರಿ), ಅರಗ ಜ್ಞಾನೇಂದ್ರ (ಪಶು ಸಂಗೋಪನೆ , ಹಜ್ ಮತ್ತು ವಕ್ಫ್), ಎಂ.ಪಿ.ಕುಮಾರಸ್ವಾಮಿ (ಪೌರಾಡಳಿತ), ಪ್ರೀತಂ ಗೌಡ (ಅಬಕಾರಿ), ಎಸ್. ಅಂಗಾರ (ಪ್ರವಾಸೋದ್ಯಮ), ರಾಜೂಗೌಡ (ತೋಟಗಾರಿಕೆ ಮತ್ತು ರೇಷ್ಮೆ)