ನ್ಯೂಸ್ ನಾಟೌಟ್: ಸಾಮಾಜಿಕ ಮಾಧ್ಯಮ ಟ್ವಿಟರ್ ಅನ್ನು ರು. 49 ಲಕ್ಷ ಕೋಟಿ ಖರೀದಿಸುವ ಒಪ್ಪಂದವನ್ನು ಕೈಬಿಡುತ್ತಿರುವುದಾಗಿ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಅವರು ಶುಕ್ರವಾರ ಹೇಳಿದ್ದಾರೆ.
ನಕಲಿ ಖಾತೆಗಳ ಕುರಿತ ಮಾಹಿತಿಯನ್ನು ನೀಡಲು ಟ್ವಿಟರ್ ವಿಫಲವಾಗಿದೆ. ಈ ಕುರಿತ ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಅದು ನಿರಾಕರಿಸಿದೆ ಎಂದು ಮಸ್ಕ್ ತಿಳಿಸಿದ್ದಾರೆ. ಟ್ವಿಟರ್ ನ ಪ್ರತಿ ಷೇರನ್ನು ₹4,299 ಖರೀದಿಸುವುದಾಗಿ ಮಸ್ಕ್ ಏಪ್ರಿಲ್ ನಲ್ಲಿ ತಿಳಿಸಿದ್ದರು. ಮಸ್ಕ್ ನಿರ್ಧಾರದ ಬೆನ್ನಿಗೇ ಟ್ವಿಟರ್ ನ ಷೇರುಗಳು ಶೇ.7ರಷ್ಟು ಕುಸಿತ ಕಂಡವು.